ಕಲಬುರುಗಿ :
ಪೊಲೀಸ್ ಇಲಾಖೆಯಲ್ಲಿ ದಕ್ಷತೆ, ನಿಷ್ಠೆ ಮತ್ತು ಅಸಾಧಾರಣ ಧೈರ್ಯದಿಂದ ಸೇವೆ ಸಲ್ಲಿಸಿರುವ ಡಿಐಜಿಪಿ ಹಾಗೂ ಪಿಟಿಸಿ ಪ್ರಾಂಶುಪಾಲರಾದ ಶ್ರೀಯುತ ಎಂ. ಪುಟ್ಟಮಾದಯ್ಯ ಅವರಿಗೆ 77ನೇ ಗಣರಾಜ್ಯೋತ್ಸವದ ಅಂಗವಾಗಿ 2026ನೇ ಸಾಲಿನ ಪೊಲೀಸ್ ಶ್ರೇಣಿಯ ಅತ್ಯುನ್ನತ “ಶ್ಲಾಘನೀಯ ಸೇವಾ ರಾಷ್ಟ್ರಪತಿ ಪದಕ” ಲಭಿಸಿರುವ ಹಿನ್ನೆಲೆ ಗುರುವಾರ ಕಲಬುರುಗಿಯಲ್ಲಿ ಭಾವಪೂರ್ಣ ಸನ್ಮಾನ ಕಾರ್ಯಕ್ರಮ ನಡೆಯಿತು.
ಬೆಳಕು ಸಂಸ್ಥೆಯ ಅಧ್ಯಕ್ಷರಾದ ಅಣ್ಣಪ್ಪ ಮೇಟಿಗೌಡ, ಕಾರುಣ್ಯ ಆಶ್ರಮದ ಡಾ. ಚನ್ನಬಸವಸ್ವಾಮಿ ಹಾಗೂ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಸ್ವಾಮಿ ಅವರು ಶ್ರೀಯುತ ಪುಟ್ಟಮಾದಯ್ಯ ಅವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಪೊಲೀಸ್ ಅಧಿಕಾರಿಯಾಗಿ ದೀರ್ಘಕಾಲ ಶ್ರೇಷ್ಠ ಕಾರ್ಯನಿರ್ವಹಣೆ ಮಾಡಿರುವುದು ಮಾತ್ರವಲ್ಲದೆ, ಸಾರ್ವಜನಿಕ ಸೇವೆಯಲ್ಲಿ ತೋರಿದ ನಿಷ್ಠೆ ಮತ್ತು ಸಮರ್ಪಣಾಭಾವವೇ ಅವರಿಗೆ ಈ ಮಹತ್ವದ ರಾಷ್ಟ್ರಪತಿ ಪದಕ ತಂದುಕೊಟ್ಟಿದೆ ಎಂದು ಪ್ರಶಂಸಿಸಿದರು. ಇಂತಹ ಅಧಿಕಾರಿಗಳು ಸಮಾಜಕ್ಕೆ ಮಾದರಿಯಾಗಿದ್ದು, ಯುವ ಅಧಿಕಾರಿಗಳಿಗೆ ಪ್ರೇರಣೆಯಾಗಿದ್ದಾರೆ. ಮತ್ತು ನಮ್ಮ ಕರ್ನಾಟಕ ರಾಜ್ಯದಲ್ಲಿ ಕಾರುಣ್ಯ ಎನ್ನುವ ಕರುಣೆಯ ಕುಟುಂಬಕ್ಕೆ ಆದಷ್ಟು ಬೇಗನೆ ಸರ್ಕಾರದ ಸ್ವಂತ ನಿವೇಶನ ಹಾಗೂ ಅನುದಾನ ಸಿಗದೆ ಎನ್ನುವುದು ನನ್ನ ವೈಯಕ್ತಿಕ ಪ್ರಾರ್ಥನೆಯಾಗಿದೆ ಎಂದು ಎಂ ಪುಟ್ಟ ಮಾದಯ್ಯ ಅವರು ಅಭಿಪ್ರಾಯಪಟ್ಟು ಅಷ್ಟು ದೂರದಿಂದ ಬಂದು ನನ್ನನ್ನು ಸನ್ಮಾನಿಸಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ವಿಭಾಗದ ಅಸಿಸ್ಟೆಂಟ್ ಕಾಮಾಂಡೆಂಟ್ ಚನ್ನಬಸವ ಮೇಟಿಗೌಡ, ಬೀರಪ್ಪ, ಮಹೇಶ್, ಅಂಬು ಪಾಟೀಲ್, ಶರಣಬಸವ,ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *