ತಾಳಿಕೋಟಿ: ಪಟ್ಟಣದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಆಯ್ಕೆ ಮಾಡಿದ ಪಟ್ಟಣದಿಂದ 4 ಕೀ ಮೀ ದೂರ ಇರೋದ್ರಿಂದ ಅದನ್ನು ರದ್ದುಗೊಳಿಸಿ ಪಟ್ಟಣದಲ್ಲಿಯೇ ಸ್ಥಳ ಆಯ್ಕೆ ಮಾಡಲು ಅಧಿಕಾರಿಗಳಿಗೆ ಸೂಚಿಸಬೇಕೆಂದು ತಾಲೂಕ ಹೋರಾಟ ಸಮಿತಿ ಪದಾಧಿಕಾರಿಗಳು ದೇವರ ಹಿಪ್ಪರಗಿ ಶಾಸಕ ಭೀಮನಗೌಡ (ರಾಜುಗೌಡ) ಪಾಟೀಲರಿಗೆ ಮನವಿ ಸಲ್ಲಿಸಿದರು. ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ರಾಜುಗೌಡ ಪಾಟೀಲರಿಗೆ ಭೇಟಿ ಮಾಡಿದ ತಾಲೂಕ ಹೋರಾಟ ಸಮಿತಿಯ ಪದಾಧಿಕಾರಿಗಳು ಪ್ರಜಾ ಸೌಧ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಆಯ್ಕೆ ಮಾಡಿದ ಸ್ಥಳ ಬಹಳ ದೂರದಲ್ಲಿರುವುದರಿಂದ ಸಾರ್ವಜನಿಕರಿಗೆ, ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ, ಮಹಿಳೆಯರಿಗೆ ಆಗುವ ತೊಂದರೆ ವಿವರವಾಗಿ ಮನದಟ್ಟು ಮಾಡಿದರು ಹಾಗೂ ಪಟ್ಟಣದಲ್ಲಿ ಸರ್ಕಾರಿ ಸ್ಥಳಗಳು ಲಭ್ಯವಿದ್ದು ಅವುಗಳನ್ನು ಆಯ್ಕೆ ಮಾಡಲು ಇರುವ ಅವಕಾಶಗಳ ಕುರಿತು ಶಾಸಕರೊಂದಿಗೆ ಚರ್ಚಿಸಿ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು ಸದರಿ ವಿಷಯದ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಹಾಗೂ ನನ್ನ ಮತಕ್ಷೇತ್ರದ ಹೆಚ್ಚಿನ ಹಳ್ಳಿಗಳು ತಾಳಿಕೋಟಿ ತಾಲೂಕಿಗೆ ಒಳಪಡುವುದರಿಂದ ಸ್ಥಳೀಯ ಶಾಸಕರಿಗೂ ಹಾಗೂ ಸಂಬಂಧ ಪಟ್ಟ ಸಚಿವರಿಗೂ ಭೇಟಿಯಾಗಿ ಪಟ್ಟಣದಲ್ಲಿಯೇ ನಿರ್ಮಾಣ ಮಾಡಿ ಎಂದು ವಿನಂತಿಸುತ್ತೇನೆ ಎಂದು ತಿಳಿಸಿದರು. ಈ ಸಮಯದಲ್ಲಿ ಜೆ ಡಿ ಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ತಾಲೂಕು ಜೆ ಡಿ ಎಸ್ ಯುವ ಮುಖಂಡ ಮಡು ಸಾಹುಕಾರ್ ಹೋರಾಟ ಸಮಿತಿಯ ಪದಾಧಿಕಾರಿಗಳಾದ , ಮುತ್ತಪ್ಪ ಚಮಲಾಪೂರ, , ವಿಜಯಸಿಂಗ್ ಹಜೇರಿ, ಪರಶುರಾಮ ತಂಗಡಗಿ ಮಯೂರ ಪಾಟೀಲ,ತಿಪ್ಪಣ್ಣ ಸಜ್ಜನ, ಅಮಿತಸಿಂಗ್ ಮನಗೂಳಿ, ಜೈಭೀಮ ಮುತ್ತಗಿ, ನಾಗೇಶ್ ಕಟ್ಟಿಮನಿ, ರವಿ ಕಟ್ಟಿಮನಿ, ರಾಗು ಮಾನೆ , ಸಿರಸಕುಮಾರ ಹಜೇರಿ, ಮುದುಕಪ್ಪ ಬಡಿಗೇರ, ಶರಣು ಗೊಟಖಂಡಕಿ,ನಿತಿನ್ ಜುಮ್ಮಣ್ಣ ನಾಲತವಾಡ, ವಿಠ್ಠಲ್ ಹಜೇರಿ, ಮಹಾಂತೇಶ ಕಟ್ಟಿಮನಿ, ರಾಜು ಹಜೇರಿ, ನಾರಾಯಣ ಹಿಂಗಮೋರೆ, ಮತ್ತಿತರರು ಇದ್ದರು.

