ತಾಳಿಕೋಟಿ: ತಾಲೂಕಿನ ಬಳಗಾನೂರ ಕ್ರಾಸ್ ನಲ್ಲಿರುವ ಕುವೆಂಪು ಗ್ರಾಮೀಣ ಅಭಿವೃದ್ಧಿ ಸಂಸ್ಥೆ(ರಿ) ಇದರ ಅಧ್ಯಕ್ಷರಾದ ಬಸವರಾಜ್ ಎನ್.ನಾಯ್ಕೋಡಿ ಹಾಗೂ ಅವರ ಧರ್ಮಪತ್ನಿ ಶಾರದಾ ಬಿ ನಾಯ್ಕೋಡಿ ಇವರನ್ನು ಶೈಕ್ಷಣಿಕ ಸೇವೆಗಾಗಿ ವೇದಿಕೆಯ ಗಣ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು. ಕಕ್ಕೇರಾ ಭಾವೈಕ್ಯತಾ ಶಿಶುನಾಳ ಶರೀಫ ಮಠದ ಸಂತ ಶ್ರೀ ಶರೀಫ ಶಿವಯೋಗಿಗಳು ಹಾಗೂ ಬಳಗಾನೂರದ ಮಾತೃಶ್ರೀ ಮಂಜುಳಾ ಅಮ್ಮನವರು ಸಾನಿಧ್ಯ ವಹಿಸಿದ್ದರು. ಗಣ್ಯರಾದ ನಿಂಗನಗೌಡ ಪಾಟೀಲ(ಬಳಗಾನೂರ),ಕಾಶಿನಾಥ ತಿ. ಸಜ್ಜನ, ಮಂದಾಕಿನಿ ಷಣ್ಮುಖಪ್ಪ ಅಮ್ಮನವರು, ಉಪಾಧ್ಯಕ್ಷ ಮಧು ಬಿ.ನಾಯ್ಕೋಡಿ, ಪ್ರಧಾನ ಕಾರ್ಯದರ್ಶಿ ಮನು ಬಿ. ನಾಯ್ಕೋಡಿ, ಉಪನ್ಯಾಸಕ ಎಚ್‌.ವಿ.ಬಾಗೇವಾಡಿ ನಿವೃತ್ತ ಶಿಕ್ಷಕ ಎಂ.ಎಸ್.ಹುಲ್ಲೂರ, ಪ್ರಾಚಾರ್ಯ ಸವಿತಾ ಎಂ.ಕಾಗಿ, ಜಯಶ್ರೀ ಎಂ.ಕಾಗಿ, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *