ಶಕ್ತಿನಗರ: ಫೆ:10: ಕರಾಟೆ
ಒಂದು ಸಂಪೂರ್ಣ ಕಲಾ ಪ್ರಕಾರವಾಗಿದ್ದು, ಆತ್ಮರಕ್ಷಣೆ, ದೈಹಿಕ ಮತ್ತು ಮಾನಸಿಕ ತರಬೇತಿ, ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಒದಗಿಸುತ್ತದೆ ಹೃದಯ ಸಂಬಂಧಿ ಫಿಟ್ನೆಸ್, ನಮ್ಯತೆ ಮತ್ತು ಒಟ್ಟಾರೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಶ್ರೀ ಸೂಗೂರೇಶ್ವರ ಕರಾಟೆ ಸಂಸ್ಥೆಯ ಸಂಸ್ಥಾಪಕರು ಹಾಗೂ ಮುಖ್ಯ ತರಬೇತಿದಾರದ ಸೂಗಪ್ಪ N ಹೇಳಿದರು.
ಅವರು ಭಾನುವಾರ 08-02-2026 ರಂದು
ತೆಲಂಗಾಣ ರಾಜ್ಯ, ಮಕ್ತಲ್ ಜಿಲ್ಲಾ, ನಾರಾಯಣಪೇಟ್ ನ ವೆಂಕಟೇಶ್ವರ ಫಂಕ್ಷನ್ ಹಾಲ್ ನಲ್ಲಿ ಡ್ರ್ಯಾಗನ್ ಶೋಟೊಕಾನ್ ಕರಾಟೆ ಡೋ ಸ್ಪೋರ್ಟ್ ಸಹಯೋಗದಲ್ಲಿ ಆಯೋಜಿಸಿದ 25 ನೇಯ ರಾಷ್ಟೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್ ಭಾಗವಹಿಸಿ ಮಾತನಾಡಿ ಓಪನ್ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್ ಕಟಾ ವಿಭಾಗದಲ್ಲಿ ಒಟ್ಟು ಸ್ಪರ್ದಿಗಳು 18 ಸ್ಪರ್ಧಿಗಳು ವಿಜೇತರಾದರು
1 ನೇ ಸ್ಥಾನಕ್ಕೆ 09 ಸ್ಪರ್ಧಿಗಳು, 2 ನೇ ಸ್ಥಾನಕ್ಕೆ 06 ಸ್ಪರ್ಧಿಗಳು, 3 ನೇ ಸ್ಥಾನಕ್ಕೆ 03 ಸ್ಪರ್ಧಿಗಳು ವಿಜೇತರಾದರು, ಒಟ್ಟು 05
ಗ್ರ್ಯಾಂಡ್ ಚಾಂಪಿಯನ ಶಿಪ್ ಪದಕ ಪಡೆದುಕೊಂಡಿದ್ದಾರೆ
ಭಾರತದಲ್ಲಿ ಕ್ರೀಡೆಯನ್ನು ಉತ್ತೇಜಿಸಲು ರಾಷ್ಟ್ರೀಯ ಕ್ರೀಡಾ ಫೆಡರೇಶನ್ ಇದೆ ಇದು ಭಾರತ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯದಿಂದ ಗುರುತಿಸಲ್ಪಟ್ಟಿದೆ ಇದು ಶಿಸ್ತು, ಗೌರವ ಮತ್ತು ಜವಾಬ್ದಾರಿ ಕಲಿಸುತ್ತದೆ ಇದನ್ನು ಕ್ರೀಡೆಯಾಗಿ ಏಷ್ಯನ್ ಗೇಮ್ಸ್‌ಗಳಂತಹ ದೊಡ್ಡ ಪಂದ್ಯಾವಳಿಗಳಲ್ಲಿ ಸೇರಿಸಲಾಗಿದೆ ಮತ್ತು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗಳು ನಡೆಯುತ್ತವೆ
ಎಂದು ತಿಳಿಸಿದರು.
ಈ ಟೂರ್ ಮೆಂಟ್ ನಲ್ಲಿ
ಸಹ ತರಬೇತಿದಾರಾದ ಪ್ರಕಾಶ್ N, ಮಹೇಂದ್ರ, ಮಲ್ಲೇಶ, ಸಾಯಿ ಕುಮಾರ್, ನಾಗರಾಜ್, ಕೆಪಿಸಿಎಲ್ ನ ಡಿ ಎ ವಿ ಸ್ಕೂಲ್ ಶಕ್ತಿನಗರ,
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೇವಸೂಗೂರು ಮಕ್ಕಳು ಬಹಳ ಅತ್ಯುತ್ಸಾಹದಿಂದ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು.
ಪಾಲಕರ ಪೋಷಕರ ಪ್ರೋತ್ಸಾಹ ದೊಂದಿಗೆ ಕಾರ್ಯಕ್ರಮ ಯಶಸ್ವಿಯಾಯಿತು.

