ಸಿಂಧನೂರು: ಸಿಂಧನೂರು ನಗರದ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿರುವ,ಜನಸಾಮಾನ್ಯರ ನಂಬಿಕೆಯ ನಾಯಕರು ಹಾಗೂ ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ (SUDA) ಅಧ್ಯಕ್ಷರಾದ ಶ್ರೀ ಬಾಬು ಗೌಡ ಬಾದರ್ಲಿ ಅವರು ದಿನಾಂಕ 8 ಫೆಬ್ರವರಿ ಬೆಳಿಗ್ಗೆ ಸುಮಾರು 9:00 ಗಂಟೆಗೆ ನಗರದ ವಾರ್ಡ್ ಸಂಖ್ಯೆ 30ರ ವಾಸವಿ ನಗರ ಹಾಗೂ ಎಸ್.ಎಸ್.ಕ್ಯೂ ಕಾಲೋನಿಗೆ ಭೇಟಿ ನೀಡಿ ಜನರ ಕುಂದು ಕೊರತೆಗಳ ಕಾರ್ಯಕ್ರಮ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ನೇರ ಸಂವಾದ ನಡೆಸಿದ ಶ್ರೀ ಬಾಬು ಗೌಡ ಬಾದರ್ಲಿ ಅವರು, ವಾರ್ಡ್‌ನ ಪ್ರತಿಯೊಂದು ಗಲ್ಲಿಗಳಲ್ಲಿ ಸಂಚರಿಸಿ ಮೂಲಭೂತ ಸೌಕರ್ಯಗಳ ಸ್ಥಿತಿ ಪರಿಶೀಲಿಸಿದರು. ಕುಡಿಯುವ ನೀರು, ಒಳಚರಂಡಿ, ರಸ್ತೆ, ವಿದ್ಯುತ್ ದೀಪಗಳು, ಸ್ವಚ್ಛತೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಸಾರ್ವಜನಿಕರು ಸಲ್ಲಿಸಿದ ಅಹವಾಲುಗಳನ್ನು ಸಹನಶೀಲತೆಯಿಂದ ಆಲಿಸಿದರು.
ವಾರ್ಡ್ ನಿವಾಸಿಗಳು ಹಾಗೂ ಕಾಂಗ್ರೆಸ್ ಯುವ ಮುಖಂಡರಾದ ಮೌಲಾಸಾಬ್ ಅವರೊಂದಿಗೆ ಸೇರಿ, ಸ್ಥಳದಲ್ಲೇ GESCOM, ನಗರಸಭೆ ಹಾಗೂ ಪಿಡಬ್ಲ್ಯೂಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಜನರಿಗೆ ತೊಂದರೆ ಉಂಟುಮಾಡುವ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.“ಜನರ ಸಮಸ್ಯೆಗಳಿಗೆ ಕಚೇರಿಯಲ್ಲಿ ಕೂತು ಅಲ್ಲ, ಸ್ಥಳಕ್ಕೆ ಬಂದು ಪರಿಹಾರ ಕಂಡುಕೊಳ್ಳುವುದೇ ನಮ್ಮ ಆಡಳಿತದ ಧೋರಣೆ” ಎಂದು ಹೇಳುವ ಮೂಲಕ ತಮ್ಮ ಜನಪರ ನಿಲುವನ್ನು ಅವರು ಸ್ಪಷ್ಟಪಡಿಸಿದರು.
ಈ ಜನಸ್ಪಂದನ ಭೇಟಿ ವೇಳೆ ವಾರ್ಡ್ ನಂಬರ್ 30ರ ನಿವಾಸಿಗಳಾದ ರವಿಪ್ರಕಾಶ್ ಸರ್, ಡಾ. ಗುರುಪ್ರಸಾದ್ ಶೆಟ್ಟಿ, ಗೋಪಿ ಶೆಟ್ಟಿ, ಮೆಹಬೂಬ್ ಸಾಬ್, ಮೈಬೂಬ್ ಸಾಬ್ (ಕೆಎಸ್‌ಆರ್‌ಟಿಸಿ), ಖಾಜಾ ಮೋಹಿನುದ್ದೀನ್ ಅತ್ತಾರ,ಶರಣು, ಗೌಸ್ ಪೀರ್ ಖಾದ್ರಿ, ಝಾಕಿರ್, ಮೌಲಾಸಾಬ್, ಅಲಿ ಮೌಲಾಲಿ, ಶೇಖ್ ಶಾಕಿರ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಉಪಸ್ಥಿತರಿದ್ದು, ತಮ್ಮ ಸಮಸ್ಯೆಗಳಿಗೆ ಸ್ಪಂದಿಸಿದ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ನೀಡಲಾದ ಸೂಚನೆಗಳನ್ನು ಶೀಘ್ರ ಜಾರಿಗೆ ತರಲು ಭರವಸೆ ನೀಡಿದರು.
ಶ್ರೀ ಬಾಬು ಗೌಡ ಬಾದರ್ಲಿ ಅವರ ಈ ಭೇಟಿ ಕೇವಲ ರಾಜಕೀಯ ಕಾರ್ಯಕ್ರಮವಲ್ಲ, ಜನರ ಬದುಕಿಗೆ ಸ್ಪಂದಿಸುವ ಜನಪರ ಆಡಳಿತದ ಪ್ರತಿಬಿಂಬವಾಗಿದ್ದು, ವಾಸವಿ ನಗರ ಹಾಗೂ ಎಸ್.ಎಸ್.ಕ್ಯೂ ಕಾಲೋನಿ ನಿವಾಸಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ವಾರ್ಡ್ ನಂಬರ್ 30ರ ನಿವಾಸಿಗಳಾದ ಮೌಲಾಸಾಬ್ ಅವರು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಯುವ ಮುಖಂಡರಾಗಿ, ವಾರ್ಡ್‌ನ ಪ್ರತಿಯೊಂದು ಸಮಸ್ಯೆಯನ್ನು ಜನರ ಬಳಿ ಕುಳಿತು ಕೇಳಿ, ಶಾಸಕರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಹಲವರು ಚುನಾವಣೆಯ ಸಮಯಕ್ಕೆ ಮಾತ್ರ ಜನರ ಬಳಿ ಕಾಣಿಸಿಕೊಳ್ಳುವ ರಾಜಕಾರಣ ಮಾಡುತ್ತಿರುವಾಗ, ಮೌಲಾಸಾಬ್ ಅವರು ಯಾವುದೇ ಹುದ್ದೆ ಅಥವಾ ಅಧಿಕಾರದ ಆಸೆ ಇಲ್ಲದೆ, ಸೇವೆಯನ್ನೇ ರಾಜಕೀಯವನ್ನಾಗಿ ಮಾಡಿಕೊಂಡಿರುವ ಮುಖಂಡರು ಎಂಬುದು ವಾರ್ಡ್ ನಿವಾಸಿಗಳ ಅಭಿಪ್ರಾಯವಾಗಿದೆ.ಜನರ ಸಮಸ್ಯೆಗಳು ತೀವ್ರವಾಗಿದ್ದ ಸಂದರ್ಭದಲ್ಲಿ, ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ (SUDA) ಅಧ್ಯಕ್ಷರಾದ ಶ್ರೀ ಬಾಬು ಗೌಡ ಬಾದರ್ಲಿ ಅವರಿಗೆ ಖುದ್ದಾಗಿ ಸಂಪರ್ಕಿಸಿ, ವಾಸವಿ ನಗರ ಹಾಗೂ ಎಸ್.ಎಸ್.ಕ್ಯೂ ಕಾಲೋನಿಗೆ ಭೇಟಿ ನೀಡುವಂತೆ ಮನವಿ ಮಾಡಿದವರು ಮೌಲಾಸಾಬ್ ಅವರೇ ಎಂಬುದು ಇಲ್ಲಿ ಗಮನಾರ್ಹ. ತಮ್ಮ ವೈಯಕ್ತಿಕ ರಾಜಕೀಯ ಲಾಭಕ್ಕಿಂತಲೂ ಜನರ ಹಿತಾಸಕ್ತಿಯನ್ನು ಮೊದಲಿಗಿಟ್ಟುಕೊಂಡು, ದೊಡ್ಡ ನಾಯಕರನ್ನು ವಾರ್ಡ್‌ಗೆ ಕರೆತಂದು ಜನರ ಸಮಸ್ಯೆಗಳನ್ನು ನೇರವಾಗಿ ತಿಳಿಸಲು ಸೇತುವೆಯಾಗಿ ಕಾರ್ಯನಿರ್ವಹಿಸಿದ್ದಾರೆ.
ಈ ಮೂಲಕ ಮೌಲಾಸಾಬ್ ಅವರು ಕೇವಲ ಹೆಸರುಮಾತ್ರದ ಯುವ ಮುಖಂಡರಲ್ಲ, ಜನರ ನಾಡಿ ತಿಳಿದ ನೆಲದ ನಾಯಕರಾಗಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಮುಂದಿನ ದಿನಗಳಲ್ಲಿ ಅವರ ರಾಜಕೀಯ ಭವಿಷ್ಯ ಇನ್ನಷ್ಟು ಬಲಿಷ್ಠವಾಗಲಿದೆ ಎಂಬುದು ನಮ್ಮ ಆಸೆ
–ವಾರ್ಡ್ ನಂಬರ್ 30 ನಿವಾಸಿಗಳು



