ಲಿಂಗಸಗೂರು : ಫೆ, 11

ಪಟ್ಟಣದ ಶಾಸಕರ
ಮಾದರಿ ಶಾಲೆಯಲ್ಲಿ
ರಾಷ್ಟ್ರೀಯ ಜಂತು ಹುಳು ನಿವಾರಣ ಕಾರ್ಯಕ್ರಮದಲ್ಲಿ
ಶಾಲಾ ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆ ನುಂಗಿಸುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿಗ ಡಾ: ಅಮರಶ್ ಪಾಟೀಲ ತಾಲೂಕಿನ ಎಲ್ಲ ಅಂಗನವಾಡಿ ಶಾಲೆ ಕಾಲೇಜುಗಳ ಒಟ್ಟು 1.24 ಲಕ್ಷ ಮಕ್ಕಳಿಗೆ ಇಲಾಖಾ ಮಾರ್ಗಸೂಚಿ ಯಂತೆ ವರ್ಷಕ್ಕೆ ಎರಡು ಬಾರಿ ಫೆಬ್ರುವರಿ ಮತ್ತು ಆಗಸ್ಟ್ ಮಾಹೆಯಲ್ಲಿ ಈ ಮಾತ್ರೆಗಳು ನೀಡಲಾಗುವುದು. ಇದು ಸಂಪೂರ್ಣ ಸುರಕ್ಷಿತವಾದ ಮಾತ್ರೆಯನ್ನು 2ರಿಂದ 19 ವರ್ಷದ ಎಲ್ಲ ಮಕ್ಕಳು ತಪ್ಪದೇ ಸೇವಿಸಬೇಕು. ಇದು ರಕ್ತ ಹೀನತೆ ತಡೆಗಟ್ಟಲು ಸಹಕಾರಿಯಾಗಿದೆ ಎಂದು ತಿಳಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸುಭಾಷ . ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಚಂದ್ರಶೇಖರ. ಮೌನೇಶ. ಬಸವರಾಜ. ಗುರು ಸಂಗಯ್ಯ. ಆರೋಗ್ಯ ಇಲಾಖೆಯ ಡಾ: ಸೌಮ್ಯ . ನಾಗರತ್ನ. ಸೀತಾ. ಹುಚ್ಚಪ್ಪ. ಸಿದ್ಧಾರೂಢ .ಪ್ರಾಣೇಶ್ .ಶಾಲಾ ಶಿಕ್ಷಕರು . ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *