ರಾಯಚೂರು ಫೆಬ್ರವರಿ 10 (ಕರ್ನಾಟಕ ವಾರ್ತೆ): ದಿನಾಂಕ: 19.02.2025 ರಿಂದ 01.03.2025ರವರೆಗೆ ಶ್ರೀ ಶೈಲಂ ಜಾತ್ರೆಯು ನಡೆಯುತ್ತಿದ್ದು, ದಿನಾಂಕ: 27.02.2025 ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ಜರುಗಲಿದೆ. ಈ ಜಾತ್ರೆಗೆ ಪ್ರತಿ ವರ್ಷದಂತೆ ಈ ವರ್ಷವು ಸಹ ರಾಯಚೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ರಾಯಚೂರು, ಲಿಂಗಸೂಗುರು, ಸಿಂಧನೂರು, ಮಾನವಿ, ದೇವದುರ್ಗ, ಮಸ್ಕಿ ಘಟಕಗಳಿಂದ ವಿಶೇಷ ಬಸ್ಸುಗಳನ್ನು ಕಾರ್ಯಾಚರಣೆಗೆ ತರಲಾಗುತ್ತಿದೆ.
ಈ ಬಸ್ಸುಗಳು ದಿನಾಂಕ: 19.02.2025 ರಿಂದ 01.03.2025ರವರೆಗೆ ರಾಯಚೂರು-ಕರ್ನೂಲ್-ಶ್ರೀಶೈಲಂ, ಸಿಂಧನೂರು-ಆದೋನಿ-ಶ್ರೀಶೈಲಂ, ಸಿಂಧನೂರು-ರಾಯಚೂರು-ಕರ್ನೂಲ್-ಶ್ರೀಶೈಲಂ, ಲಿಂಗಸೂಗುರು-ರಾಯಚೂರು-ಕರ್ನೂಲ್-ಶ್ರೀಶೈಲಂ, ಲಿಂಗಸೂಗುರು-ಮಸ್ಕಿ-ಸಿಂಧನೂರು-ಆದೋನಿ-ಶ್ರೀಶೈಲಂ, ಮಾನವಿ-ರಾಯಚೂರು-ಕರ್ನೂಲ್-ಶ್ರೀಶೈಲಂ,ದೇವದುರ್ಗ-ರಾಯಚೂರು-ಕರ್ನೂಲ್-ಶ್ರೀಶೈಲಂ, ಮಸ್ಕಿ-ರಾಯಚೂರು-ಕರ್ನೂಲ್-ಶ್ರೀಶೈಲಂ, ಮಸ್ಕಿ-ಸಿಂಧನೂರು-ಆದೋನಿ-ಶ್ರೀಶೈಲಂ ಮಾರ್ಗದಲ್ಲಿ ಕಾರ್ಯಾಚರಣೆಗೆ ತರಲಾಗುತ್ತಿದೆ.
50 ಪ್ರಯಾಣಿಕರು ಲಭ್ಯವಿದ್ದಲ್ಲಿ ಅವರ ಸ್ವ-ಸ್ಥಳದಿಂದ ನೇರವಾಗಿ ಶ್ರೀಶೈಲಂಗೆ ಬಸ್ಸು ವ್ಯವಸ್ಥೆಯನ್ನು ಒದಗಿಸುವದಕ್ಕೆ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಹಾಗೂ ಪ್ರಯಾಣಿಕರು ಮಹಾನಂದಿಗೆ ಹೋಗುವದಕ್ಕೆ ಇಷ್ಟ ಪಟ್ಟಲ್ಲಿ ಅಲ್ಲಿಗೆ ಕರೆದುಕೊಂಡು ಹೋಗಿ ಬರಲಾಗುತ್ತದೆ. ಶ್ರೀಶೈಲಂಗೆ ಹೋಗಿ ಬರುವ ಪ್ರಯಾಣಿಕರು, ಈ ವಿಶೇಷ ಬಸ್ಸುಗಳ ಸೌರ್ಕಯವನ್ನು ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ 1ನೇ ಘಟಕ ರಾಯಚೂರು: 7760992363, 2ನೇ ಘಟಕ ರಾಯಚೂರು: 7760992364, 3ನೇ ಘಟಕ ರಾಯಚೂರು: 7619351087, ಲಿಂಗಸೂಗುರು: 7760992365, ಸಿಂಧನೂರು: 7760992366, ಮಾನವಿ: 7760992367, ದೇವದುರ್ಗ: 7760992368, ಮಸ್ಕಿ: 7760992361 ಹಾಗೂ ವಿಭಾಗೀಯ ಸಂಚಾರ ಅಧಿಕಾರಿಗಳ ಸಂಖ್ಯೆ: 7760992352ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಚಂದ್ರಶೇಖರ ಎಂ.ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *