ತಾಳಿಕೋಟಿ :ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಂಗಳವಾರ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ್ ಕಕ್ಕಯ್ಯ, ಉರಿಲಿಂಗ ಪೆದ್ದಿ, ಸಮಗಾರ ಹರಳಯ್ಯ ಜಯಂತೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ ಮಾತನಾಡಿ ಕ್ರಾಂತಿಯೋಗಿ ಬಸವಣ್ಣನವರ ಸಮ ಸಮಾಜದ ನಿರ್ಮಾಣದ ಆಂದೋಲನದಲ್ಲಿ ಎಲ್ಲ ಶರಣರು ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ ಅವರೆಲ್ಲರ ಆದರ್ಶ ಬದುಕು ನಮಗೆ ಮಾದರಿ ಯೋಗ್ಯವಾಗಿದೆ ಎಂದರು. ಈ ಸಮಯದಲ್ಲಿ ಮುಖ್ಯಗುರುಗಳಾದ ಸಂತೋಷ ಪವಾರ, ಜವಳಗೇರಿ, ದೈಹಿಕ ಶಿಕ್ಷಕರಾದ ಬಸವರಾಜ ಚಳಗಿ,ಶಾಂತಗೌಡ ಬಿರಾದಾರ, ಸಂಜು ಕುಮಾರ ರಾಠೋಡ, ಬಸವರಾಜ ಸವದತ್ತಿ, ರವಿಕುಮಾರ , ರವಿಕುಮಾರ ಮಲಾಬಾದಿ, ರಸೂಲಸಾ ತುರ್ಕಣಗೇರಿ, ಸಿದ್ದನಗೌಡ ಮುದ್ನೂರ, ಭೀಮನಗೌಡ ಸಾಸನೂರ, ಚೇತನ ನಾವದಗಿ, ಸವಿತಾ ಅಸ್ಕಿ,ಶಿವಲೀಲಾ ಚುಂಚೂರು, ರೂಪ ಪಾಟೀಲ, ಸಂಗಮೇಶ ಬಿರಾದಾರ, ಸಂಗೀತ ಬಿರಾದಾರ, ಮೇಘಾ ಪಾಟೀಲ, ಬೋರಮ್ಮ ಉಕ್ಕಲಿ, ಅನಿತಾ ಚೌದ್ರಿ, ಜ್ಯೋತಿ ಪೋಲಿಸ್ ಪಾಟೀಲ, ಶೃತಿ ಚೌದ್ರಿ,ರಾಜಬಿ ಬಿದರಿ, ನಾಗರತ್ನ ಮೈಲೇಶ್ವರ,ಶಿವಕುಮಾರ ಕುಂಬಾರ, ಹೀನಾ ಸನದಿ, ದೇವೇಂದ್ರ ಗುಳೆದ, ಮುಬಾರಕ ಬನ್ನಟ್ಟಿ,ದೇವರಾಜ ದೇಸಾಯಿ, ಸುಮಾ ಹಿರೇಮಠ, ಪ್ರತಿಭಾ ಗುಬ್ಬೇವಾಡ, ಗುರುದೇವಿ ಮಡಿವಾಳರ, ಜೈಯಶ್ರೀ ಹದಿಮೂರ, ಜೈರಾಬಿ ಮುಲ್ಲಾ ಸರ್ವ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

