ಸಿಂಧನೂರು:
ಗೋವಾದ ಗ್ಯಾಲಕ್ಷಿ ಅಂತರಾಷ್ಟ್ರೀಯ ಅಬಾಕಾಸ್ ಸಂಸ್ಥೆಯಲ್ಲಿ ಜರುಗಿದ ೭ ನೇ ರಾಷ್ಟçಮಟ್ಟದ ಅಬಾಕಾಸ ಮತ್ತು ಮಾನಸಿಕ ಅಂಕಗಣಿತದ ಸ್ಪರ್ಧೆ ೨೦೨೬ ಪೆರ್ನೆಮಾ ಮಲ್ಟಿಪರ್ಪೋಸೊಳಾಂಗಣ ಮೈದಾನ ಗೋವಾದಲ್ಲಿ ಅಯೋಜಿಸಿದ್ದ ಸಿಂಧನೂರಿನ ಪ್ರೇರಣಾ ಅಬಾಕಸ್ ಸಂಸ್ಥೆಯ ವಿದ್ಯಾರ್ಥಿನಿ ಭಾರತ್ ಸ್ಕೌಟ್ಸ್ ಗೈಡ್ಸ್ ಮುಕ್ತದಳ ಬುಲ್ ಬುಲ್ ವಿಭಾಗದ ವಿದ್ಯಾರ್ಥಿನಿ ಸಮೃದ್ಧಿ ಶಿವಯೋಗಿ ಸಂದ್ಯಾಳ ಅವರು ೮ ವರ್ಷದೊಳಗಿನ ಎಫ್ ಗ್ರೂಪ್ ಸ್ಪರ್ಧೆಯಲ್ಲಿ ಚಾಂಪಯನ್ ಆಗಿದ್ದಾಳೆಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಬೀರಪ್ಪ ಶಂಭೋಜಿ ತಿಳಿಸಿದ್ದಾರೆ.
ಅಭಿನಂದನೆಗಳು: ವಿದ್ಯಾರ್ಥಿನಿಯ ಸಾಧನೆಗೆ ನಿವೇದಿತಾ ತೋರಣಗಲ್, ಗೈಡ್ ಕ್ಯಾಪ್ಟನ ಶ್ವೇತಾ ಗೊರವರ, ಸೌಜನ್ಯ ಹಿರೇಮಠ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

