ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ರಾಯಚೂರು ಘಟಕದ ವತಿಯಿಂದ ಕೃಷ್ಣ ಮೇಲ್ದಂಡೆ ಯೋಜನೆ ಹಂತ–3 ಅನ್ನು ತಕ್ಷಣ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಇಂದು ಆಲಮಟ್ಟಿಯಲ್ಲಿ ಹೋರಾಟ ಮಾಡಲಾಗುವುದು

ಇಂದು ದಿನಾಂಕ 09 ಸೋ, ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ರಾಯಚೂರು ಘಟಕದ ಸಭೆ ನಡೆಯಿತು. ಸಂಘದ ಉಪಾಧ್ಯಕ್ಷರಾದ ಲಕ್ಷ್ಮಿ ಪಾಟೀಲ್ ಮದ್ರಿಕಿ ಇವರ ನೇತೃತ್ವದಲ್ಲಿ ರೈತರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಆಲಮಟ್ಟಿಯಲ್ಲಿ ಹೋರಾಟ ಮಾಡಲಾಗುವುದು ಎಂದು ಹೇಳಿದರು .

ಸಭೆಯ ನಂತರ “ರೈತರ ನಡೆ ಆಲಮಟ್ಟಿ ಜಲಾಶಯ ಕಡೆ” ಎಂಬ ಘೋಷಣೆಯೊಂದಿಗೆ ರಾಯಚೂರು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ರೈತರು ಜಾಲಹಳ್ಳಿ ಪ್ರವಾಸಿ ಮಂದಿರದಿಂದ ವಾಹನಗಳ ಮೂಲಕ ಆಲಮಟ್ಟಿ ಜಲಾಶಯದತ್ತ ಹೊರಟರು.

ಈ ಸಂದರ್ಭದಲ್ಲಿ ವರದಿಗಾರ ರೊಂದಿಗೆ ಜೊತೆ ಮಾತನಾಡಿದ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಜಿಲ್ಲಾ ಅಧ್ಯಕ್ಷರಾದ ಇಂದ್ರಜಿತ್ ಯಾದವ್ ಅವರು,

> “ರೈತರು ವರ್ಷದಲ್ಲಿ ಎರಡು ಬೆಳೆ ಬೆಳೆಯಲು ಅನುಕೂಲವಾಗುವಂತೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಬೇಕು. ನೀರಿನ ಸಂಗ್ರಹಣೆಯನ್ನು ಹೆಚ್ಚಿಸಬೇಕು. ಈ ಬೇಡಿಕೆಗೆ ಆಗ್ರಹಿಸಿ ಆಲಮಟ್ಟಿ ಡ್ಯಾಮ್ ಬಳಿ ಹೋರಾಟ ನಡೆಸಲಾಗುವುದು”
ಎಂದು ಹೇಳಿದರು.

ಜಿಲ್ಲಾ ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನ್ ಪಾಟಿಲ್ ಮಾತನಾಡಿ,

> “ರಾಯಚೂರು ಜಿಲ್ಲೆ ಹಾಗೂ ದೇವದುರ್ಗ ತಾಲೂಕಿನ ಎಲ್ಲಾ ರೈತರು ಒಂದಾಗಿ ಶಾಶ್ವತ ಪರಿಹಾರಕ್ಕಾಗಿ ಆಲಮಟ್ಟಿ ಜಲಾಶಯದತ್ತ ಹೋರಾಟಕ್ಕೆ ಹೊರಡುತ್ತಿದ್ದೇವೆ”
ಎಂದು ತಿಳಿಸಿದರು.

ಜಿಲ್ಲಾ ಕಾರ್ಯಾಧ್ಯಕ್ಷರಾದ ಮುಜಾಹಿದ್ ಮಾರ್ಚಡ್ ಮಾತನಾಡಿ,“ಬಚಾವತ್ ಆಯೋಗದ ಶಿಫಾರಸಿನಂತೆ 700 ಟಿಎಂಸಿ ನೀರಿನ ಬಳಕೆಗೆ ಅವಕಾಶ ಕಲ್ಪಿಸಬೇಕು. ಆಲಮಟ್ಟಿ ಜಲಾಶಯದ ಹೂಳು ತೆಗೆದು ನೀರು ಸಂಗ್ರಹಣೆಯನ್ನು ಹೆಚ್ಚಿಸಬೇಕು ಹಾಗೂ ಡ್ಯಾಮ್ ಎತ್ತರವನ್ನು 17 ಅಡಿ ಹೆಚ್ಚಿಸಬೇಕು”

ಎಂದು ಒತ್ತಾಯಿಸಿದರು.ದೇವದುರ್ಗ ತಾಲೂಕು ಅಧ್ಯಕ್ಷರಾದ ಮಹದೇವ ಯಾದವ್ ಮಾತನಾಡಿ, “ಸುಮಾರು 200ಕ್ಕೂ ಹೆಚ್ಚು ರೈತರು ಜಾಲಹಳ್ಳಿ ಪ್ರವಾಸಿ ಮಂದಿರದಲ್ಲಿ ಸೇರಿ ಕೃಷ್ಣ ಮೇಲ್ದಂಡೆ ಯೋಜನೆ ಹಂತ–3 ಅನುಷ್ಠಾನಕ್ಕಾಗಿ ಆಲಮಟ್ಟಿ ಜಲಾಶಯಕ್ಕೆ ವಾಹನಗಳ ಮೂಲಕ ತೆರಳಿ ಹೋರಾಟ ನಡೆಸಲಿದ್ದೇವೆ. ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಹೂಳು ತೆಗೆಯುವ ಕಾರ್ಯವನ್ನು ತಕ್ಷಣ ಕೈಗೊಳ್ಳಬೇಕು”

ಎಂದು ಸರ್ಕಾರವನ್ನು ಆಗ್ರಹಿಸಿದರು. ಈ ಹೋರಾಟ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ರಾಯಚೂರು ಮತ್ತು ದೇವದುರ್ಗ ಘಟಕದ ಎಲ್ಲಾ ಪದಾಧಿಕಾರಿಗಳು ಹಾಗೂ ನೂರಾರು ರೈತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *