ಬಳ್ಳಾರಿ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಯ 110/11ಕೆ.ವಿ ಬಿಸಿಲಹಳ್ಳಿ ವಿದ್ಯುತ್ ಉಪ-ಕೇಂದ್ರದಿ0ದ ವಿದ್ಯುತ್ ಸರಬರಾಜಾಗುವ ಎಫ್-63 ಹಾಗು ಎಫ್-64 ಫೀಡರ್ ಗಳಲ್ಲಿ ಲಿಂಕ್-ಲೈನ್ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಫೆ.09 ರಂದು ಬೆಳಿಗ್ಗೆ 09 ರಿಂದ ಸಂಜೆ 06 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:

ಎಫ್-63 ವ್ಯಾಪ್ತಿಯ ರೂಪನಗುಡಿ, ಗ್ರಾಂಡ್ ಫಂಕ್ಷನ್ ಹಾಲ್, ವೆಂಕಟರಮಣ ನಗರ, ನಬೀ ಕಾಲೋನಿ, ಅಂಜಿನಪ್ಪ ನಗರ, ಶ್ರೀರಾಂಪುರ ಕಾಲೋನಿ, ಗೋನಾಳ್, ವರಬಸಪ್ಪ ಗುಡಿ ಹಾಗೂ ಮುಂತಾದ ಏರಿಯಾಗಳು.

ಎಫ್-64 ವ್ಯಾಪ್ತಿಯ ಎಸ್.ಆರ್.ಎಂ ಲೇ ಔಟ್, ಸಂಸ್ಕೃತಿ ಶಾಲೆ, ವಿಶಾಲ ನಗರ, ಹನುಮಾನ್ ನಗರ, ಬಿ.ಗೋನಾಳ್, ಹೌಸಿಂಗ್ ಬೋರ್ಡ್, ವೆಂಕಟಲಕ್ಷಿö್ಮ ನಗರ, ಅಂಜಿನಪ್ಪ ನಗರ, ಎಸ್.ಆರ್.ಪಿ ಕಾಲೋನಿ, ಎಮ್.ಜಿ ರಸ್ತೆ, ಅನಂತಪುರ ರಸ್ತೆ, ಅಗಡಿ ಮಾರೆಪ್ಪ ಕಾಂಪೌ0ಡ್, ದತ್ತ ಸಾಯಿ ನಗರ, ಆಶ್ರಯ ಕಾಲೋನಿ.

ಎಫ್-52 ವ್ಯಾಪ್ತಿಯ ತಿರುಮಲ ನಗರ ಕ್ಯಾಂಪ್, ಶಂಕರಬ0ಡೆ, ಇಬ್ರಾಹಿಂಪುರ, ಬಬ್ಬುಕುಂಟೆ, ಬುರನಾಯಕಹಳ್ಳಿ ಐ.ಪಿ ಫೀಡರ್ ಏರಿಯಾಗಳು. ಎಫ್-53 ವ್ಯಾಪ್ತಿಯ ತಿರುಮಲ ನಗರ ಕ್ಯಾಂಪ್, ಶಂಕರ ಬಂಡೆ, ಇಬ್ರಾಹಿಂಪುರ, ಬಬ್ಬುಕುಂಟೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಹಾಗಾಗಿ ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *