ಮುದ್ದೇಬಿಹಾಳ: ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಉತ್ತೇಜಿಸುವ ಉದ್ದೇಶದಿಂದ ಆಕ್ಸ್ಫರ್ಡ್ ಕೋಚಿಂಗ್ ಮತ್ತು ಪಬ್ಲಿಕ್ ಸ್ಕೂಲ್ ವತಿಯಿಂದ “ಚಾಣಕ್ಯ ಟಾಲೆಂಟ್ ಹಂಟ್ ಪರೀಕ್ಷೆ–2026” ಆಯೋಜಿಸಲಾಗಿದೆ.

ಈ ಪರೀಕ್ಷೆ ಫೆಬ್ರವರಿ 8, 2026 ರಂದು ಬೆಳಿಗ್ಗೆ 11:30ಕ್ಕೆ ಮುದ್ದೇಬಿಹಾಳದ ಮಾರುತಿ ನಗರದಲ್ಲಿರುವ ಆಕ್ಸ್ಫರ್ಡ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಯಲಿದೆ.
3ರಿಂದ 9ನೇ ತರಗತಿ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಬಹುದಾಗಿದೆ. ಪರೀಕ್ಷೆಯಲ್ಲಿ ಕನ್ನಡ, ಇಂಗ್ಲಿಷ್ ವ್ಯಾಕರಣ, ಗಣಿತ, ವಿಜ್ಞಾನ ಹಾಗೂ ಐಕ್ಯೂ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಇರಲಿವೆ. ಒಟ್ಟು 100 ಪ್ರಶ್ನೆಗಳಿರುವ ಈ ಪರೀಕ್ಷೆಗೆ 120 ನಿಮಿಷಗಳ ಅವಧಿ ನಿಗದಿಪಡಿಸಲಾಗಿದೆ.

ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ತಮ್ಮ ಶಾಲಾ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ತರಬೇಕೆಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಸಮ್ಮರ್ ಕ್ಯಾಂಪ್–2026 ಪ್ರವೇಶವೂ ಆರಂಭಗೊಂಡಿದ್ದು, ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ಮೂಲಭೂತ ಶಿಕ್ಷಣ ಮತ್ತು ವಿಷಯಾಧಾರಿತ ತರಬೇತಿ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಆಸಕ್ತರು 9844835696, 9148650860 ಅಥವಾ 8861729836 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *