ತಾಲೂಕಿನ ಯದ್ದಲದೊಡ್ಡಿ ಗ್ರಾಮದಲ್ಲಿ 2022-23ನೇ ಸಾಲಿನ ಕಲ್ಯಾಣ ಕರ್ನಾಟಕದ (ಮೈಕ್ರೋ) ಅಭಿವೃದ್ಧಿ ಅನುದಾನದ ಯೋಜನಡಿಯಲ್ಲಿ ನಿರ್ಮಾಣವಾದ ಅಂಗನವಾಡಿ ಕೇಂದ್ರವು ಶುಕ್ರವಾರ ಮಧ್ಯಾಹ್ನ 1 ಗಂಟೆಯಾದರೂ ಕೂಡ ತೆರೆಯದಿದ್ದ ಕಾರಣ ಮಕ್ಕಳು ಹೊರಗಡೆ ಕಾಯುತ್ತಾ ಕುಳಿತ ದೃಶ್ಯ ಕಂಡು ಬಂತು!
ಅಂಗನವಾಡಿ ಟೀಚರ್ ಪ್ರಮೀಳಾ ಅವರು, ದಿನವು ಟೈಮ್ ಸರಿಯಾಗಿ ಬರುವುದಿಲ್ಲ ಲೇಟಾಗಿ ಬರುತ್ತಾರೆ. ಸರಿಯಾಗಿ ಪಾಠ ಹೇಳುವುದಿಲ್ಲ. ಸರ್ಕಾರದಿಂದ ಎಲ್ಲಾ ದಿನಸಿ ಸಾಮಗ್ರಿಗಳು ಬಂದರು. ಮಕ್ಕಳಿಗೆ ಸರಿಯಾಗಿ ಕೊಡುವುದಿಲ್ಲ ಎಂದು ಗ್ರಾಮಸ್ಥರ ಆರೋಪವಿದೆ. ಸಂಬಂಧಪಟ್ಟ ಅಧಿಕಾರಿಗಳು ಅಂಗನವಾಡಿ ಟೀಚರ್ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಪ್ರತಿಭಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಟೀಚರ್ ಬರುವುದನ್ನೆ ಬಿಸಿಲಿನಲ್ಲಿ ಕಾಯುತ್ತಾ ಕುಳಿತಿದ್ದ ಮಕ್ಕಳನ್ನು ವಿಚಾರಿಸಿದರೆ ಒಂದೊಂದು ಸಾರಿ ಜಲ್ದಿ ಬರುತ್ತಾರೆ. ಒಂದೊಂದು ಸಾರಿ ಲೇಟಾಗಿ ಬರುತ್ತಾರೆ ಎಂದು ಉತ್ತರಿಸಿದರು.

