ಲಿಂಗಸಗೂರ : ಫೆ, 6 ತಾಲೂಕ ಅಂಜುಮನ್ – ಎ – ಮುಸ್ಲಿಮೀನ್ ಕಮಿಟಿ(ರಿ) ವತಿಯಿಂದ ಯರಗುಂಟಿ ಗ್ರಾಮದ ಮಸೀದಿಯಲ್ಲಿ ನಡೆದ ಸಭೆಯಲ್ಲಿ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನಡೆಯಿತು ಅಂಜುಮನ್ – ಎ-ಮುಸ್ಲಿಮೀನ್ ಯರಗುಂಟಿ ಗ್ರಾಮದ ಕಮಿಟಿಯ ಗೌರವ ಅಧ್ಯಕ್ಷರಾಗಿ ಹುಸೇನ್ ಸಾಬ್ ಮುಲ್ಲಾರ, ಅಧ್ಯಕ್ಷರಾಗಿ ರಾಜಸಾಬ್ ಹುಡೇದ್, ಉಪಾಧ್ಯಕ್ಷರಾಗಿ ಇಸಾಕ್ ಸಾಬ್ ನವಲಿ, ಕಾರ್ಯಧ್ಯಕ್ಷರಾಗಿ ಸದ್ದಾಂ ಹುಸೇನ್, ಪ್ರಧಾನ ಕಾರ್ಯದರ್ಶಿಯಾಗಿ ಉಸ್ಮಾನ್ ಸಾಬ್ ಅಗಸಿಮುಂದಿನ, ಜಂಟಿ ಕಾರ್ಯದರ್ಶಿಯಾಗಿ ಶರೀಫ್ ಹೊಸಮನಿ, ಸದಸ್ಯರಾಗಿ ರಾಜಸಾಬ್, ಅಜೇಲಿ ಸಾಬ್, ಅಬ್ದುಲ್ಲಾ ಸಾಬ್, ಕಾಶೀಂಸಾಬ್, ಹೊನ್ನೀರ್ ಸಾಬ್, ಕರೀಂಸಾಬ್, ಕರೀಂಸಾಬ್ ದಿಡ್ಡಿ, ಇಸಾಕ್ ಸಾಬ್, ಶಾರುಖಾನ್, ಮುಯ್ಯ ಸಾಬ್ ಹಾಗೂ ಮಹ್ಮದ್ ರಫಿ ಇವರನ್ನ ಯರಗುಂಟಿ ಗ್ರಾಮದ ಸಮುದಾಯದವರ ಒಮ್ಮತದ ಅಭಿಪ್ರಾಯ ಮೇರೆಗೆ ಆಯ್ಕೆ ಮಾಡಲಾಯಿತು ಹಾಗೂ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸಗೂರ ತಾಲೂಕು ಕಮಿಟಿಗೆ ಯರಗುಂಟಿ ಗ್ರಾಮದಿಂದ ಜನಾಬ್ ಹುಸೇನ್ ಸಾಬ್, ಜನಾಬ್ ಅಮೀರ್ ಸಾಬ್, ಜನಾಬ್ ರಹೇಮಾನ್ ಸಾಬ್, ಜನಾಬ್ ಖಾಸಿಂಸಾಬ್ & ಜನಾಬ್ ಯಮನೂರ ಸಾಬ್ ಇವರನ್ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸಗೂರ ತಾಲೂಕು ಕಮಿಟಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಯರಗುಂಟಿ ಗ್ರಾಮದ ಸಮುದಾಯದ ಗುರು ಹಿರಿಯರು ಸಹೋದರರು ಉಪಸ್ಥಿತರಿದ್ದರು

