ತಾಳಿಕೋಟಿ: ಸಮೀಪದ ಹಡಗಿನಾಳ ಗ್ರಾಮದ ಶ್ರೀ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ ನಾಳೆ ಫೆಬ್ರವರಿ 6 ರಂದು ಜರುಗಲಿದೆ. ಜಾತ್ರೆಯ ಅಂಗವಾಗಿ ಫೆಬ್ರವರಿ ಆರರಂದು ಬೆಳಿಗ್ಗೆ 6-00 ಘಂಟೆಗೆ ಸಂಗಮೇಶ್ವರ ದೇವಸ್ಥಾನದಿಂದ ಶ್ರೀ ಗ್ರಾಮದೇವತೆ ದೇವಸ್ಥಾನದವರೆಗೆ ಕುಂಭ ಕಳಸದ ಮೆರವಣಿಗೆಯು ಡೊಳ್ಳು ಕುಣಿತ ಕರಡಿಮಜಲು ಹಾಗೂ ಸಕಲ ವಾದ್ಯ ಮೇಳಗಳೊಂದಿಗೆ ನಡೆಯುವುದು. ಅಂದೆ ಮಧ್ಯಾಹ್ನ 12 ಘಂಟೆಯಿಂದ ರಾತ್ರಿ 10:00 ಘಂಟೆ ವರೆಗೆ ಮಹಾಪ್ರಸಾದ ಇರುವುದು. ರಾತ್ರಿ 8-00 ಘಂಟೆಗೆ ವೇದಿಕೆ ಕಾರ್ಯಕ್ರಮ ಇರುವುದು ಇದರ ಸಾನಿಧ್ಯವನ್ನು ಖಾಸ್ಗತೇಶ್ವರ ಮಠದ ಪೂಜ್ಯ ಶ್ರೀ ಸಿದ್ದಲಿಂಗ ದೇವರು ಹಾಗೂ ಸರೂರ ಹಾಲುಮತ ಗುರುಪೀಠದ ಪೂಜ್ಯಶ್ರೀ ಸಿದ್ದಯ್ಯ ಮಹಾಸ್ವಾಮಿಗಳು ವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕರಾದ ಅಪ್ಪಾಜಿ ನಾಡಗೌಡ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ(ನಡಹಳ್ಳಿ), ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್ ಪಾಟೀಲ(ಯಾಳಗಿ), ಜಿ.ಪಂ. ಮಾಜಿ ಸದಸ್ಯರಾದ ನಿಂಗಪ್ಪ ಬಪ್ಪರಗಿ, ಪ್ರಭುಗೌಡ ದೇಸಾಯಿ, ಬಿಜೆಪಿ ಮುಖಂಡ ಆರ್ ಎಸ್ ಪಾಟೀಲ (ಕೂಚಬಾಳ), ಕಾಂಗ್ರೆಸ್ ಮುಖಂಡರಾದ ಸಿ.ಬಿ.ಅಸ್ಕಿ, ಶಾಂತಗೌಡ ನಡಹಳ್ಳಿ, ಸುರೇಶ ಧಣಿ ಬಿಂಜಲಭಾವಿ, ಸಿದ್ದನಗೌಡ ಪಾಟೀಲ(ನಾವದಗಿ), ಪ್ರಭುಗೌಡ ಮದರಕಲ್ಲ,ಶರಣು ಧಣಿ ದೇಶಮುಖ, ಹಾಲುಮತ ಸಮಾಜದ ತಾಲೂಕ ಅಧ್ಯಕ್ಷ ಎನ್.ಎಂ.ಮದರಿ, ಕಾಂಗ್ರೆಸ್ ಪ್ರಚಾರ ಸಮಿತಿ ತಾಲೂಕಾಧ್ಯಕ್ಷ ವೀರೇಶಗೌಡ ಬಾಗೇವಾಡಿ ಹಾಗೂ ಅತಿಥಿಗಳಾಗಿ ಮೂಕಿಹಾಳ ಗ್ರಾಪಂ ಅಧ್ಯಕ್ಷ ಎಚ್.ವೈ.ಮೇಟಿ, ಉಪಾಧ್ಯಕ್ಷೆ ಬೋರಮ್ಮ ಎನ್ ದೇಸಾಯಿ, ಹರನಾಳ ಪಿಕೆಪಿಎಸ್ ಅಧ್ಯಕ್ಷ ಕಾಶೀಮಪಟೇಲ ಪಾಟೀಲ, ಯುವ ಮುಖಂಡ ಶಿವರಾಜ ಗುಂಡಕನಾಳ, ಗುತ್ತಿಗೆದಾರ ಶರಣಗೌಡ ನಾಗರೆಡ್ಡಿ, ಸಂಗನಗೌಡ ಅಸ್ಕಿ, ಪಿಕೆಪಿಎಸ್ ಸದಸ್ಯ ಕಾಶಿನಾಥ ದೇಸಾಯಿ ಆಗಮಿಸುವರು. ರಾತ್ರಿ 10.30 ಗಂಟೆಗೆ ಹಂಚಿನಾಳ ಶ್ರೀ ಕುಮಾರೇಶ್ವರ ನಾಟ್ಯ ಸಂಘದಿಂದ ಮಾತು ಬಿದ್ದಿತು ಮೌನ ಗೆದ್ದಿತು ನಾಟಕ ಹಾಗೂ ಫೆ.8 ರಂದು ರಾತ್ರಿ 9-00 ಘಂಟೆಗೆ ಶ್ರೀ ಬಸವೇಶ್ವರ ಬಯಲಾಟ ಸಂಘ ರಬಿನಾಳ ಇವರಿಂದ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಇವರ ಕುರಿತು ಬೈಲಾಟ ಜಾತ ಇರುವುದು. ಫೆಬ್ರವರಿ 10 ರಂದು ಬೆಳಿಗ್ಗೆ 10:00 ಗಂಟೆಗೆ ಗ್ರಾಮ ದೇವತೆ ಗರ್ಭಗುಡಿಯ ಪ್ರವೇಶ ಕಾರ್ಯಕ್ರಮ ನಡೆಯುವುದು.

Leave a Reply

Your email address will not be published. Required fields are marked *