ತಾಳಿಕೋಟಿ: ಪಟ್ಟಣದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಹಂಡೇ ವಜೀರ ಸಮಾಜದ ತಾಲೂಕ ಘಟಕದ ವತಿಯಿಂದ ಹಮ್ಮಿಕೊಂಡ 2026 ನೇ ಸಾಲಿನ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಸಮಾಜ ಸೇವಕ ಡಾ.ಪ್ರಭುಗೌಡ ಲಿಂಗದಳ್ಳಿ ಇವರನ್ನು ಸಮಾಜಮುಖಿ ಕಾರ್ಯಗಳಿಗಾಗಿ ಸನ್ಮಾನಿಸಿ ಗೌರವಿಸಲಾಯಿತು.ಪೂಜ್ಯರಾದ ಜಯಗುರು ಸಿದ್ದೇಶ್ವರ ಮಹಾಸ್ವಾಮಿಗಳು, ಗುರುಮಡಿವಾಳೇಶ್ವರ ಶಿವಾಚಾರ್ಯರು, ಶಿವಕುಮಾರ ಶ್ರೀಗಳು,ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಬಿಜೆಪಿ ಮುಖಂಡ ಆರ್ ಎಸ್ ಪಾಟೀಲ ಕೂಚಬಾಳ,ಕಸಾಪ ಅಧ್ಯಕ್ಷ ಆರ್.ಎಲ್.ಕೊಪ್ಪದ, ಹ.ವ.ಸ.ತಾಳಿಕೋಟಿ ಘಟಕದ ಅಧ್ಯಕ್ಷ ರಾಮನಗೌಡ ಬಿರಾದಾರ ಹಾಗೂ ಗಣ್ಯಮಾನ್ಯರು ಇದ್ದರು.

Leave a Reply

Your email address will not be published. Required fields are marked *