ಮಸ್ಕಿ ಪೊಲೀಸ್ ಠಾಣೆಯ ಪೊಲೀಸರ ವಸತಿಗೃಹಗಳ ಕಟ್ಟಡಗಳು ನಿರ್ಮಾಣ ಮಾಡಿ ಅಂದಾಜು 50 ವರ್ಷಕ್ಕೂ ಅಧಿಕವಾಗಿದ್ದು , ಹೀಗಾಗಿ ಪೊಲೀಸ್ ಇಲಾಖೆಯ ಕಟ್ಟಡಗಳು ಸಂಪೂರ್ಣ ಶೀತಲಾವಸ್ತೆಯಲ್ಲಿದ್ದು ಅದಕ್ಕಾಗಿ ಅವುಗಳನ್ನ ನೆಲಸಮಾಡಲು ಬೆಂಗಳೂರು ಪೊಲೀಸ್ ಪ್ರಧಾನ ಕಚೇರಿಯಿಂದ ಪತ್ರಿಕೆಯಲ್ಲಿ ಪ್ರಕಟವಾದ ಆದೇಶ ನೀಡಿದ ಹಿನ್ನೆಲೆಯಲ್ಲಿ, ಮಸ್ಕಿ ಸರ್ಕಲ್ ಇನ್ಸ್ಪೆಕ್ಟರ್ ರಾಮಣ್ಣ ಜಲಗಾರ ಮತ್ತು ಪಿಎಸ್ಐ ರಂಗಯ್ಯ ಕೆ ನೇತೃತ್ವದಲ್ಲಿ ಪೊಲೀಸ್ ಠಾಣಾ ಆವರಣದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಿತು. ಒಟ್ಟು ಏಳು ಜನ ಆಸಕ್ತ ಬಿಡ್ ದಾರರು ಪಾಲ್ಗೊಂಡಿದ್ದರು. ಸರ್ಕಾರಿ ನಿಗದಿತ ಬಿಟ್ ಮೊತ್ತ 90500 ರೂಪಾಯಿ ಆಗಿತ್ತು, ತೀವ್ರ ಸ್ಪರ್ಧೆ ನಡುವೆ
ಬಿ ನಾಗರಾಜ್ ಅವರು 99000 ರೂಪಾಯಿ ಮೊತ್ತಕ್ಕೆ ಅಂತಿಮ ಬಿಡ್ ಸಲ್ಲಿಸಿ ಹರಾಜನ್ನು ತಮ್ಮ ಹೆಸರಿಗೆ ಪಡೆದರು. ಈ ಒಂದು ಹರಾಜು ಪ್ರಕ್ರಿಯೆ ಸಂಪೂರ್ಣ ಪಾರದರ್ಶಕತೆ ಮತ್ತು ನಿಯಮನುಸಾರದಿಂದ ಪಿಎಸ್ಐ ರಂಗಯ್ಯ ಕೆ ಮತ್ತು ಸಿಬ್ಬಂದಿಗಳು ನಡೆಸಿದರು. ಮುಂದಿನ ದಿನಗಳಲ್ಲಿ ಹಳೆಯ ಕಟ್ಟಡಗಳನ್ನು ನೆಲಸಮಾಡಿ, ಹೊಸ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅವಕಾಶ ಕಲ್ಪಿಸಲಾಗವುದು ಎನ್ನಲಾಗಿದೆ.

