ಮಸ್ಕಿ,ಫೆ,3:- ರಾಯಚೂರು ಇತಿಹಾಸದ ನೆಲ ಬಿಸಿಲಿನ ನಾಡು,ಹೋರಾಟಗಳ ಮಣ್ಣಿನ ಊರು.
ಆದರೆ ಇಂದು,
ಈ ನೆಲದ ಜನ ಕೇಳುತ್ತಿರುವ ಪ್ರಶ್ನೆ ಒಂದೇ—
“ಇದು ಜನರ ಉತ್ಸವವೇ? ಅಥವಾ ಅಧಿಕಾರಿಗಳ ಉತ್ಸವವೇ?”
ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ
ಪ್ರಚಾರಾರ್ಥ ಜ್ಯೋತಿ ರಥಯಾತ್ರೆ
ಮಂಗಳವಾರ ಮದ್ಯಾಹ್ನ ಮಸ್ಕಿಗೆ ಆಗಮಿಸಿತು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ
ಮಹಾತ್ಮ ಗಾಂಧಿ ಹಾಗೂ
ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಗಳಿಗೆ
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾಲಾರ್ಪಣೆ ಮಾಡಿದರು.
ವಿದ್ಯಾರ್ಥಿಗಳು…
ಶಿಕ್ಷಕರು…
ತಹಸೀಲ್ದಾರರು…
ಪುರಸಭೆ ಅಧ್ಯಕ್ಷರು,ಸದಸ್ಯರು
ಜ್ಯೋತಿ ರಥಯಾತ್ರೆಯೊಂದಿಗೆ
ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಗೆ ತೆರಳಿದರು.
ಆದರೆ…
ಈ ಮೆರುಗು, ಈ ಶೋ, ಈ ಮೆರವಣಿಗೆಯ ನಡುವೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ
ದೊಡ್ಡಪ್ಪ ಮುರಾರಿ ಮಾತನಾಡುತ್ತಾ ಹೇಳಿದರು.
“ಇದು ಜನಸಾಮಾನ್ಯರ ಉತ್ಸವವಾಗಬೇಕಿತ್ತು.
ಆದರೆ ಇಂದು ಇದು
ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಉತ್ಸವದಂತೆ ಕಾಣುತ್ತಿದೆ,ಜನರು, ರೈತರು
ಇಂದು ವಿಷಮದಾಯಕ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ.
ಅವರ ಸಮಸ್ಯೆಗಳನ್ನು ಬಗೆಹರಿಸುವ ಬದಲು
ದುಂದು ವೆಚ್ಚ ಮಾಡಿ ಉತ್ಸವ ಮಾಡುವುದು
ತರವಲ್ಲ.”
ನಂತರ ಮಾತನಾಡಿದ
ಜನಕವಿ, ದಲಿತ ಕವಿ
ಸಿ. ದಾನಪ್ಪ ನಿಲಗಲ್
“ಇದು ಜನಮಾನಸದ ಉತ್ಸವವಾಗಬೇಕು.
ತೋರಿಕೆಯ ಉತ್ಸವವಾಗಬಾರದು.”
“ಬಡಜನರ, ಕೂಲಿಕಾರ್ಮಿಕರ,
ವಿದ್ಯಾರ್ಥಿಗಳ, ಯುವಜನರ
ಕಲ್ಯಾಣವಾಗಬೇಕು.”
“ಕೋಟಿಗಟ್ಟಲೆ ಹಣ ಖರ್ಚು ಮಾಡಿ ಉತ್ಸವ ಮಾಡಿದರೆ
ಕಲ್ಯಾಣ ಕರ್ನಾಟಕ ನಿರ್ಮಾಣವಾಗುವುದಿಲ್ಲ.”
ಇಂದು ಪ್ರಶ್ನೆ ಒಂದೇ
ಜನರ ನೋವಿಗೆ ಸ್ಪಂದಿಸದ ಉತ್ಸವ
ಯಾರಿಗಾಗಿ? ರೈತ, ಕಾರ್ಮಿಕ, ವಿದ್ಯಾರ್ಥಿಗಳ ಬದುಕು ಸುಧಾರಿಸದ
ಉತ್ಸವದ ಅರ್ಥವೇನು?ರಾಯಚೂರು ಉತ್ಸವ
ಸಂಭ್ರಮವಾಗಬೇಕಾ…ಅಥವಾ ಆತ್ಮಪರಿಶೀಲನೆಯ ವೇದಿಕೆಯಾಗಬೇಕಾ…?ಉತ್ತರವನ್ನು
ಜನತೆಯೇ ತೀರ್ಮಾನಿಸಬೇಕು.
ವರದಿ: ಸುರೇಶ ಬಳಗಾನೂರು


