ರಾಯಚೂರು ಜನವರಿ 31 (ಕರ್ನಾಟಕ ವಾರ್ತೆ): ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ 2025-26ನೇ ಸಾಲಿಗೆ ಮಂಜೂರಾಗಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಮೇರಿಟ್ ಕಮ್ ರೋಷ್ಟರ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ: ಸ್ತ್ರೀ ರೋಗ ತಜ್ಞರು-02 ಹುದ್ದೆ ತಾಯಿ ಆರೋಗ್ಯ ಕಾರ್ಯಕ್ರಮ, ಮಕ್ಕಳ ತಜ್ಞರು-02 ಹುದ್ದೆಗಳು ಮಕ್ಕಳ ಆರೋಗ್ಯ ಕಾರ್ಯಕ್ರಮ, ನೇತ್ರ ತಜ್ಞರು-01 ಅಂಧತ್ವ ಕಾರ್ಯಕ್ರಮ, ಕಿವಿ ಹಾಗೂ ಮೂಗು ಗಂಟಲು ತಜ್ಞರು-02 ಎನ್.ಪಿ.ಪಿ.ಸಿ.ಡಿ ಮಾನ್ವಿ ಹಾಗೂ ಲಿಂಗಸೂಗೂರು, ಸೈಕ್ಯಾಟ್ರಿಷ್ಟ್ ತಜ್ಞರು–01 ಹುದ್ದೆ ಎನ್.ಎಂ.ಹೆಚ್.ಪಿ. ಕಾರ್ಯಕ್ರಮ ಟಿ.ಎಂ.ಹೆಚ್.ಪಿ. ಲಿಂಗಸೂಗೂರು, ಆಯುಷ್ ಪಂಚಕರ್ಮ ತಜ್ಞರು-01 ಹುದ್ದೆ ಆಯುಷ್ ಕಾರ್ಯಕ್ರಮ, ಎಂ.ಬಿ.ಬಿ.ಎಸ್. ವೈದ್ಯರು-02 ಹುದ್ದೆಗಳು ಎಸ್.ಎನ್.ಸಿ.ಯು. ವಿಭಾಗ ರಿಮ್ಸ್ ಬೋಧಕ ಆಸ್ಪತ್ರೆ, ಎಂ.ಬಿ.ಬಿ.ಎಸ್. ವೈದ್ಯರು-03 ಹುದ್ದೆಗಳು ಹೆಚ್.ಡಿ.ಯು. ವಿಭಾಗ ರಿಮ್ಸ್ ಬೋಧಕ ಆಸ್ಪತ್ರೆ, ಎಂ.ಬಿ.ಬಿ.ಎಸ್. ವೈದ್ಯರು-01 ಹುದ್ದೆ ಎನ್.ಆರ್.ಸಿ. ವಿಭಾಗ ರಿಮ್ಸ್ ಬೋಧಕ ಆಸ್ಪತ್ರೆ, ಎಂ.ಬಿ.ಬಿ.ಎಸ್. ವೈದ್ಯರು-02 ಹುದ್ದೆಗಳು ಐ.ಸಿ.ಯು. ತಾಲೂಕು ಸಾರ್ವಜನಿಕ ಆಸ್ಪತ್ರೆ ದೇವದುರ್ಗ ಹಾಗೂ ಸಿಂಧನೂರು, ಎಂ.ಬಿ.ಬಿ.ಎಸ್. ವೈದ್ಯರು-06 ಹುದ್ದೆಗಳು ಎನ್.ಸಿ.ಡಿ. ವಿಭಾಗ ಸಾರ್ವಜನಿಕ ಆಸ್ಪತ್ರೆ ಲಿಂಗಸೂಗೂರು, ಮಾನ್ವಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಜಾಲಹಳ್ಳಿ, ಅರಕೇರಾ, ಮುದುಗಲ್ ಹಾಗೂ ಅನೆಹೋಸೂರು, ಎಂ.ಬಿ.ಬಿ.ಎಸ್, ವೈದ್ಯರು-04 ಹುದ್ದೆಗಳು ಪಿ.ಎಂ. ಅಭೀಮ್ ನಮ್ಮ ಕ್ಲಿನಿಕ್ ಕರಡಕಲ್, ಕವಿತಾಳ್, ತುರ್ವಿಹಾಳ್ ಹಾಗೂ ಮಸ್ಕಿ, ಒಟ್ಟು-27 ಹುದ್ದೆಗಳಿಗೆ ಫ್ರೆಬವರಿ 4ರ ಬೆಳಿಗ್ಗೆ 11.30ಕ್ಕೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯೋಜನಾ ಅಭಿವೃದ್ಧಿ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಲಯ ರಾಯಚೂರು ಕಚೇರಿ ಅವಧಿಯಲ್ಲಿ ಮಾಹಿತಿಯನ್ನು ಪಡೆಯಬಹುದು. ಅಥವಾ ದೂರವಾಣಿ ಸಂಖ್ಯೆ : 9449843121ಗೆ ಅಥವಾ ಕಚೇರಿಯ ಸೂಚನಾ ಫಲಕ ನೋಡಬಹುದಾಗಿದೆ ಎಂದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

