ಹಾಲಾಪೂರ : ಪ್ರಸ್ತುತ ರಾಯಚೂರು ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯಿತಿಗಳ ಸದಸ್ಯರ ಅವಧಿ ಬರುವ ಫೆಬ್ರವರಿ ಎರಡಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ಅಧಿನಿಯಮ1993 ಪ್ರಕರಣ ಅನ್ವಯ ಆಡಳಿತ ಅಧಿಕಾರಿಗಳನ್ನು ಮುಂದಿನ ಚುನಾವಣೆವರೆಗೆ ಜಿಲ್ಲಾಧಿಕಾರಿಗಳು, ತಾಲೂಕುವಾರು ಅಧಿಕಾರಿಗಳನ್ನು ನೇಮಿಸಿ ಆದೇಶಿಸಿದ್ದಾರೆ. ಅದರಂತೆ ಮಸ್ಕಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ತಾಲೂಕುವಾರು ಅಧಿಕಾರಿಗಳು ಗ್ರಾಮ ಪಂಚಾಯತಿಗೆ ನೇಮಕವಾಗಿದ್ದು, ಹಾಲಾಪೂರ ಗ್ರಾಮ ಪಂಚಾಯಿತಿಗೆ ಆಡಳಿತ ಅಧಿಕಾರಿಯಾಗಿ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಮಾನ್ವಿ ಇವರು ನೇಮಕವಾಗಿದ್ದು, ಸದರಿ ಆಡಳಿತ ಅಧಿಕಾರಿ ಪ್ರಭಾರ ವಹಿಸಿಕೊಂಡು ಸರ್ಕಾರ ನೀಡಿರುವ ನಿರ್ದೇಶನವನ್ನ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಯವರ ಆದೇಶವಾಗಿದೆ.

