ಹಾಲಾಪೂರ ಗ್ರಾಮದಲ್ಲಿರುವ ದಿ ಬೆಸ್ಟ್ ಪಬ್ಲಿಕ್ ವಿದ್ಯಾ ಸಂಸ್ಥೆಯಲ್ಲಿ ವ್ಯಕ್ತಿತ್ವ ವಿಕಾಸನ ಶಿಬಿರ ನಡೆಯಿತು. ಈ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ವಾಗ್ಮಿಗಳಾದ ಶ್ರೀ ಗಿರಿಧರ್ ಪೂಜಾರ್ ಮಕ್ಕಳಿಗೆ ವ್ಯಕ್ತಿತ್ವ ವಿಕಾಸನ ಕುರಿತು ಅತ್ಯುತ್ತಮ ಸಲಹೆಗಳನ್ನು ಹಾಗೂ ವಿದ್ಯಾರ್ಥಿಗಳ ಜೀವನದ ಬದುಕು ,ಗುರಿಗಳ ಬಗ್ಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಇರಬೇಕಾದ ಗೌರವ ಸಮರ್ಪಣೆ ಭಾವನೆ ಹೊಂದಬೇಕು, ನಿರಂತರ ಅಭ್ಯಾಸ ಕ್ರಿಯಾಶೀಲತೆಯಿಂದ ತೊಡಗಬೇಕು, ಆಟ ಮತ್ತು ಪಾಠ ಎರಡಕ್ಕೂ ಆದ್ಯತೆ ಕೊಡಬೇಕು, ಮೊಬೈಲ್,ಟಿವಿಗಳಿಂದ ಆದಷ್ಟು ದೂರವಿದ್ದು, ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಕೊಡಬೇಕು ಎಂದು ಇನ್ನು ಉಪಯುಕ್ತ ಸಲಹೆಗಳನ್ನು ನೀಡಿದರು. ನಂತರ ಸಂಸ್ಥೆಯ ವತಿಯಿಂದ ಶ್ರೀಯುತರಿಗೆ ಗೌರವ ಸನ್ಮಾನ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ ಗದ್ದೆಪ್ಪ , ಉಪಾಧ್ಯಕ್ಷ ಕೆ ಶೇಖರಪ್ಪ, ಕಾರ್ಯದರ್ಶಿ ಬಿ ಸಿದ್ದು , ಪ್ರೌಢಶಾಲಾ ಮುಖ್ಯಗುರು ರವಿಕುಮಾರ ತೋರಣದಿನ್ನಿ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಗುರು ಕುಮಾರ ಮಸ್ಕಿ, ಶಿಕ್ಷಕರಾದ ಕುಪ್ಪಣ್ಣ. ಕೃಷ್ಣಕುಮಾರ. ದೇವೇಂದ್ರಪ್ಪ ಹಾಗೂ ಇನ್ನಿತರ ಶಿಕ್ಷಕ, ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


