ಮಾನ್ವಿ: ತಾಲೂಕಿನ ಉಮಳಿ ಹೋಸುರು ಗ್ರಾಮದಲ್ಲಿನ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ 40 ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪುರವಂತರ ಸೇವೆ , ಪಲ್ಲಕ್ಕಿ ಉತ್ಸಾವ ನಡೆಯಿತು, ಗ್ರಾಮಸ್ಥರು ಕಾತರಿಕಿ ಮೌನೇಶ್ವರ ಮಠದ ಶ್ರೀ ಅಯ್ಯಪ್ಪ ತಾತನವರ ಸಾನಿಧ್ಯದಲ್ಲಿ ಶ್ರೀ ಜಗದ್ಗುರು ಮೌನೇಶ್ವರ ಉಚ್ಚಾಯ ಮಹೋತ್ಸವವನ್ನು ವೈಭವದಿಂದ ಭಕ್ತಿ ಭಾವದಿಂದ ನೆರವೇರಿಸಿದರು.
ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಗ್ರಾಮೀಣ ಭಾಗದ ರೈತರ ದೇಸಿ ಕ್ರೀಡೆಯಾದ ಗಿರ್ಕೀ ಬಂಡಿ ಓಟದ ಸ್ಪರ್ಧೆ ಹಾಗೂ ಕಬ್ಬಡಿ ಪಂದ್ಯಾವಳಿಗಳಿಗೆ ಸುವರ್ಣಗಿರಿ ಅಡವಿ ಅಮರೇಶ್ವರ ಮಠದ ಶ್ರೀ ತೋಂಟದಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿ ಆಶೀರ್ವಾಚನ ನೀಡಿ ಇಂದಿನ ದಿನಗಳಲ್ಲಿ ರೈತರ ಅವಿಭಾಜ್ಯ ಅಂಗವೇದೆ ಪರಗಣಿಸಲಾಗುವ ಎತ್ತುಗಳೊಂದಿಗೆ ರೈತರು ಗೀರ್ಕಿ ಬಂಡಿ ಓಟದಲ್ಲಿ ಭಾಗವಹಿಸುವ ಮೂಲಕ ನಮ್ಮ ಅಪ್ಪಟ ಗ್ರಾಮೀಣ ಕ್ರೀಡೆಯನ್ನು ಮುಂದಿನ ಪಿಳಿಗೆಗೆ ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದ್ದಾರೆ ಇಂತಹ ಗ್ರಾಮೀಣ ಕ್ರೀಡೆಗಳನ್ನು ಹೆಚ್ಚು ಹೆಚ್ಚು ನಡೆಸುವ ಮೂಲಕ ಅವುಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಗೀರ್ಕಿ ಬಂಡಿ ಓಟದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ರೈತ ಅರುಣ್ ಕುಮಾರ್ ನವಲಕಲ್ ರವರ ಎತ್ತುಗಳು ಪ್ರಥಮ ಸ್ಥಾನ ಪಡೆದು 20 ಸಾವಿರ, ರೈತ ಹನುಮೇಶ ಬೆಟ್ಟದೂರು ರವರ ಎತ್ತುಗಳು ದ್ವಿತೀಯ ಸ್ಥಾನ ಪಡೆದು10 ಸಾವಿರ , ರೈತ ಹನುಮಯ್ಯ ನೀರಮಾನವಿ ರವರ ಎತ್ತುಗಳು ತೃತೀಯ ಸ್ಥಾನ ಪಡೆದು ಆರು ಸಾವಿರ, ಬಹುಮಾನ 6ಸಾವಿರ ರೂ. ರೈತ ದದ್ದಲ್ ಸಣ್ಣ ವಿರೇಶ್ ರವರ ಎತ್ತುಗಳು ನಾಲ್ಕನೇ ಸ್ಥಾನ ಪಡೆಯುವ ಮೂಲಕ 4 ಸಾವಿರ ನಗದು ಬಹುಮಾನಗಳನ್ನು ಪಡೆದುಕೊಂಡರು. ಬಹುಮಾನಗಳನ್ನು ಪಂಪಣ್ಣ ಮ್ಯಾಕ್ಕಲ್, ಶರಣಪ್ಪ ಗೌಡ ಮಾಲಿ ಪಾಟೀಲ್ , ಮಹೇಂದ್ರ ನಾಯಕ್ ಮ್ಯಾಕಲ್ ,ಶಶಿಕುಮಾರ್ ಹೀರೆಮಠ ವಿತರಿಸಿದರು. ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದ ಜಮೀನಿನಲ್ಲಿ ನಡೆದ ಓಪನ್ ಮ್ಯಾಟ್ ಕಬ್ಬಡಿ ಪಂದ್ಯಾವಳಿಯಲ್ಲಿ ಬಾಗಲವಾಡ ತಂಡ ಪ್ರಥಮ. ಉಮಳಿಹೊಸುರು ತಂಡ ದ್ವೀತಿಯ, ಕೊರವಿ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡರು. ಕಬ್ಬಡಿ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಶರಣಪ್ಪ ಗೌಡ ಮಾಲಿ ಪಾಟೀಲ್ ,ಲಚ್ಚುಮಯ್ಯ ನಾಯಕ ಗೊಬ್ಬರಕಲ್,ಅಂಬಣ್ಣ ನಾಯಕ ಬೇನೂರು ಬಹುಮಾನಗಳನ್ನು ವಿತರಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಗೀರ್ಕಿ ಬಂಡಿ ಓಟದ ಸ್ಪರ್ಧೆ ಹಾಗೂ ಕಬ್ಬಡಿ ಪಂದ್ಯಾವಳಿಗಳನ್ನು ವಿಕ್ಷೀಸುವುದಕ್ಕಾಗಿ ಉಮಳಿ ಹೋಸುರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು,ಗ್ರಾಮಸ್ಥಾರು ಆಗಮಿಸಿದರು.
30-ಮಾನ್ವಿ-3:
ಮಾನ್ವಿ: ತಾಲೂಕಿನ ಉಮಳಿ ಹೋಸುರು ಗ್ರಾಮದಲ್ಲಿ ಸಾವಿರಾರು ಭಕ್ತರಿಂದ ಶ್ರೀ ಜಗದ್ಗುರು ಮೌನೇಶ್ವರ 40 ನೇ ವರ್ಷದ ಜಾತ್ರಾ ಮಹೋತ್ಸವ ನಡೆಯಿತು.
ಮಾನ್ವಿ: ತಾಲೂಕಿನ ಉಮಳಿ ಹೋಸುರು ಗ್ರಾಮದಲ್ಲಿ ಶ್ರೀ ಜಗದ್ಗುರು ಮೌನೇಶ್ವರ ಜಾತ್ರಾ ಮಹೋತ್ಸವದಲ್ಲಿ ಗೀರ್ಕಿ ಬಂಡಿ ಓಟದ ಸ್ಪರ್ಧೆಗೆ ಶ್ರೀ ತೋಂಟದಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿದರು.

Leave a Reply

Your email address will not be published. Required fields are marked *