ನರ ಮತ್ತು ಚರ್ಮದ ಖಾಯಿಲೆಯಾಗಿರುವ ಹಾಗೂ ಶತ ಶತಮಾನಗಳಿಂದ ಇಂದಿಗೂ ಸಮುದಾಯದಲ್ಲಿರುವ ಕುಷ್ಠರೋಗವನ್ನು ನಿರ್ಮೂಲನೆ ಮಾಡಲು, ಯಾರಿಗಾದರೂ ದೇಹದ ಮೇಲೆ ಸ್ಪರ್ಶಜ್ಞಾನವಿಲ್ಲದ ತಿಳಿಬಿಳಿ ತಾಮ್ರವರ್ಣದ ಮಚ್ಚೆಗಳು ಇದ್ದಲ್ಲಿ, ಕೈಕಾಲುಗಳಲ್ಲಿ ಜೋಮು ಕಂಡು ಬಂದಲ್ಲಿ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ ಖಚಿತಪಟ್ಟಲ್ಲಿ ಚಿನ್ಹೆಗಳ ಆಧಾರದ ಮೇಲೆ 6 ತಿಂಗಳಿನಿಂದ ಒಂದು ವರ್ಷದ ಅವಧಿಯ ಉಚಿತ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಲು ನಾವೆಲ್ಲರೂ ಜಾಗೃತಿ ನೀಡೋಣವೆಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ ಮಹಮ್ಮದ್ ಶಾಕೀರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ, ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋನದಡಿ ರಾಯಚೂರುನ ಮಂತ್ರಾಲಯ ರಸ್ತೆಯಲ್ಲಿಯ ಕಾಶಿ ವಿಶ್ವನಾಥ ದೇವಸ್ಥಾನದ ಹತ್ತಿರದ ಕಾಲೋನಿಯಲ್ಲಿ ಜಾಗೃತಿ ನೀಡಿ ಮಾತನಾಡುತ್ತಾ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ರವರ ಮಾರ್ಗದರ್ಶನದಲ್ಲಿ ಜನೇವರಿ 30 ರಿಂದ ಫೇಬ್ರುವರಿ 13 ರವರೆಗೆ ಜಿಲ್ಲೆಯಾದ್ಯಂತ ಅಂತರ ಇಲಾಖೆಗಳ ಸಮನ್ವಯದೊಂದಿಗೆ, ಇದು ಮೈಕೊ ಬ್ಯಾಕ್ಟಿರಿಯಂ ಲೇಪ್ರೆ ಎಂಬ ಸೂಕ್ಷ್ಮಾಣುವಿನಿಂದ ಬರುವ ಹಾಗೂ ಖಾಯಿಲೆ ಹೊಂದಿದ ವ್ಯಕ್ತಿ ಕೆಮ್ಮುದಾಗ, ಸಿನಿದಾಗ ಬ್ಯಾಕ್ಟಿರಿಯಾವು ಉಸಿರಿನ ಮೂಲಕ ಜೊತೆಗಿರುವವರಿಗೆ ದೀರ್ಘಾವಧಿಯಲ್ಲಿ ಬರುತ್ತದಾದರೂ ಸಹ ಸೂಕ್ತ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖವಾಗುವುದೆಂದು ತಿಳಿಸಿದರು.
ಜಹೀರಬಾದ ನಗರ ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿ ಡಾ ಶ್ವೇತಾಂಬರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ,ಅಸಿಸ್ ಆಸ್ಪತ್ರೆ ವೈದ್ಯರಾದ ಡಾ ಟೀನ್, ಶುಶ್ರೂಷಕಿ ರಿಟ್ನಾ, ಡಿವೈಹೆಚ್‌ಇಓ ಬಸಯ್ಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ, ಭೀಮೇಶಪ್ಪ, ಡಿ ಸುರೇಶ್, ದೊಡ್ಡಮನಿ ಬಿಬಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ ಕೆ, ಎಲ್‌ಟಿಓ ಸಾಯಿರಾಬಾನು, ಮೃತ್ಯುಂಜಯ, ಹೆಚ್‌ಐಓ ಮಹೇಂದ್ರ, ರೇಶ್ಮಾ ರಾಜೇಶ್ವರಿ, ಪಿಎಮ್‌ಡಬ್ಲೂ ರಾಜು, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಶಾರದಾ, ಪದ್ಮಾ, ಆಶಾ ಕಾರ್ಯಕರ್ತೆ ಸುಮಲತಾ, ಸಾವಿತ್ರಿ, ಸಿದ್ದಲಿಂಗಮ್ಮ, ಅಂಗನವಾಡಿ ಕಾರ್ಯಕರ್ತೆ ಗದ್ದೆಮ್ಮ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

