ಕೊಪ್ಪಳ: ಗಂಗಾವತಿ ತಾಲ್ಲೂಕಿನ ಹೆರೂರು ಗ್ರಾಮದ 5ನೇ ವಾರ್ಡಿನ ನಿವಾಸಿ ಹನುಮಂತ ಭೀಮಪ್ಪ ಮೈಲಾಪೂರ(48)ಕಾಣೆಯಾಗಿದ್ದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.25/2026 ಕಲಂ ಮನುಷ್ಯ ಕಾಣೆ ಅಡಿ ಪ್ರಕರಣ ದಾಖಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.ಕಾಣೆಯಾದ ವ್ಯಕ್ತಿಯ ಚಹರೆ ವಿವರ:
ವ್ಯಕ್ತಿಯು 5.6 ಫೀಟ್ ಎತ್ತರವಿದ್ದು, ದುಂಡು ಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ ಕಪ್ಪು ಕೂದಲು ಇದ್ದು, ಬಲಗೈ ಮುಂಗೈಗೆ ಮೀನಾಕ್ಷಿ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಕನ್ನಡ ಭಾಷೆಯುನ್ನು ಮಾತನಾಡುತ್ತಾರೆ.
ಮೇಲ್ಕಂಡ ಚಹರೆಯ ವ್ಯಕ್ತಿಯ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಜಿಲ್ಲಾ ಪೆÇಲೀಸ್ ಅಧೀಕ್ಷಕರು:08539-230222, ಪೊಲೀಸ್ ಉಪಾಧೀಕ್ಷಕರು: 08533-230853, ಆರಕ್ಷಕ ನಿರೀಕ್ಷಕರು, ಗಂಗಾವತಿ ಗ್ರಾಮೀಣ ಠಾಣೆ: 08533-230854, 9480803730 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ತಿಳಿಸಿದೆ.

