ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆದ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ವತಿಯಿಂದ ಕಾನೂನು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಮಾದರಿ ವಿಧಾನಸಭೆ ಅಧಿವೇಶನ ಸ್ಪರ್ಧೆ -2026 ರ ಸ್ಪರ್ಧೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ವಿದ್ಯಾರ್ಥಿಯಾಗಿ ಸಿಂಧನೂರು ತಾಲೂಕಿನ ತುರವಿಹಾಳ ಸಮೀಪದ ಕೆ ಹೊಸಹಳ್ಳಿ ಗ್ರಾಮದ ಯುವಕ ಶಂಕರ್ ಹೋಬಳಿ ಬಂಡಿ ಅವರು ರಾಜ್ಯಕ್ಕೆ 7ನೇ ಸ್ಥಾನ ಪಡೆದು ರಾಜ್ಯಕ್ಕೆ ಮಾದರಿ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ.
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಬೆಂಗಳೂರು,ವಿಕಾಸ ಸೌಧದಲ್ಲಿ ಹಮ್ಮಿಕೊಂಡಿದ್ದ ಕಾನೂನು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಮಾದರಿ ವಿಧಾನಸಭೆ ಅಧಿವೇಶನ ಸ್ಪರ್ಧೆ -2026 ರಲ್ಲಿ ಕಾನೂನು ಮಂತ್ರಿಯಾಗಿ ಭಾಗವಹಿಸಿ “ಕರ್ನಾಟಕ ಮಹಿಳಾ ಕಿರುಕುಳ ನಿಷೇಧ ವಿಧೇಯಕ 2026” ಮಂಡಿಸಿ ವಿರೋಧ ಪಕ್ಷದ ಟೀಕೆ ಮತ್ತು ಪ್ರತಿ ಟೀಕೆಗಳನ್ನ ಎದುರಿಸಿ. ಕರ್ನಾಟಕ ರಾಜ್ಯವು ಮಹಿಳೆಯರ ಸುರಕ್ಷತೆ ಮತ್ತು ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳು ಮತ್ತು ಕಾನೂನು ದೃಷ್ಟಿಕೋನದಲ್ಲಿನ ದಂಡನೆಗಳು ಎಲ್ಲವನ್ನು ಒಳಗೊಂಡಂತೆ ಕೇಂದ್ರೀಯ ಮಹಿಳಾ ಅಪರಾಧ ಸಮ್ಮಿತೆಗಳೊಂದಿಗೆ ಈ ಕಾಯ್ದೆ ಹೇಗೆ ಹೊಂದಿಕೊಂಡಿದೆ ಎನ್ನುವುದನ್ನು ಎಳೆಏಳೆಯಾಗಿ ಸದನದ ಮುಂದೆ ಪ್ರಸ್ತಾಪಿಸಿದ ಕಾನೂನು ಮಂತ್ರಿ ಶಂಕರ್ ಓಬಳಬಂಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ವಿದ್ಯಾರ್ಥಿಯಾಗಿ ರಾಜ್ಯಮಟ್ಟದಲ್ಲಿ ಪಾಲ್ಗೊಂಡು ರಾಜ್ಯಕ್ಕೆ 7ನೇ ಸ್ಥಾನ ಪಡೆದುಕೊಂಡರು.
ಈ ಸಂಧರ್ಭದಲ್ಲಿ ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಮೂರ್ತಿ ಶ್ರೀ ಪಿ ಎನ್ ದೇಸಾಯಿ,ಅಧ್ಯಕ್ಷರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಬೆಂಗಳೂರು ಇವರಿಂದ ಪ್ರಮಾಣ ಪತ್ರ ಪಡೆದು ಪ್ರೊ.ಸಿ.ಎಸ್.ಪಾಟೀಲ್ ನಿರ್ದೇಶಕರು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಬೆಂಗಳೂರು ಡಾ.ರೇವಯ್ಯ ಒಡೆಯರ್ ಸಂಶೋಧನಾ ಮುಖ್ಯಸ್ಥರು (ಸಂಸದೀಯ) ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ ಬೆಂಗಳೂರು ಉಪಸ್ಥಿತರಿದ್ದರು. ಕಾನೂನು ವಿದ್ಯಾರ್ಥಿಯಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಕ್ಕೆ ಕೆ.ಹೊಸಹಳ್ಳಿ ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ಕೆ ಹೊಸಹಳ್ಳಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.

