ಮಸ್ಕಿ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವು ರಾಜಿನಾಮೆಯಿಂದ ತೆರವಾಗಿದ್ದು, ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮಾಜದ ಕಾಂಗ್ರೆಸ್ ಮುಖಂಡ ಅಬ್ದುಲ್ ಖಾದೀರಿ ಚೌದ್ರಿ ಅವರಿಗೆ ನೀಡಬೇಕೆಂದು ಮುಸ್ಲಿಂ ಸಮಾಜದ ಗುರುಗಳಾದ ಜಿಲಾನಿ ಖಾಜಿ ಶಾಸಕರಿಗೆ ಒತ್ತಾಯಿಸಿದರು.
ಈ ಕುರಿತು ಗುರುವಾರ ಪತ್ರಿಕಾ ಭವದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಮುಸ್ಲಿಂ ಸಮಾಜದ ಮುಖಂಡರು ಮತ್ತು ಕಾರ್ಯಕರ್ತರು ದುಡಿದಿದ್ದಾರೆ. ಆದ್ದರಿಂದ ಇತ್ತೀಚೆಗೆ ಆರ್.ಸಿದ್ದನಗೌಡರು ರಾಜಿನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನ ಖಾಲಿದ್ದು, ಸಮಾಜದ ಮುಖಂಡ ಅಬ್ದುಲ್ ಖಾದೀರಿ ಅವರಿಗೆ ಪ್ರಾಧಿಕಾರದ ಅಧ್ಯಕ್ಷನನ್ನಾಗಿ ಶಾಸಕರು ನೇಮಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಬ್ದುಲ್ ಖಾದೀರ್ ಖುರೇಷಿ, ಅಜ್ಜು ಮೆಕಾನಿಕ್, ಫಾರೂಕ್, ಮೈಹಿಬೂಬ ಮೇಸ್ತಿç, ಬಸವರಾಜ ಕೋಠಾರಿ ಇದ್ದರು.

Leave a Reply

Your email address will not be published. Required fields are marked *