ಬಳಗಾನೂರು : ಜಿಲ್ಲೆಯ ಮಸ್ಕಿ ತಾಲ್ಲೂಕಿನ ಬಳಗಾನೂರ ಪಟ್ಟಣದ ಶ್ರೀಬಸವೇಶ್ವರ ಸಂಯುಕ್ತ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ “ಮೌನೇಶ ನಾಯಕ ತಂದಿ ನಾಗಪ್ಪ ನಾಯಕ ಕಾರಟಿಗಿ,, ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾವಳಿಗೆ ಆಯ್ಕೆ…ಕರ್ನಾಟಕ ರಾಜ್ಯ ಅಮೇಚೂರ್ ಖೋ ಖೋ ಅಸೋಸಿಯೆಷನ್ ಬೆಂಗಳೂರ ಸಂಸ್ಥೆ ವತಿಯಿಂದ ತುಮಕೂರ, ಬೆಂಗಳೂರು ನಲ್ಲಿ ದಿನಾಂಕ. ಜನೆವರಿ 31 ರಿಂದ ಪೆಬ್ರುವರಿ 3ರ ವರೆಗೆ ನಡೆಯುವ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾಟಗಳಿಗೆ ಆಯ್ಕೆಯಾಗಿದ್ದಾನೆ..ಬಳಗನೂರಿನ ಶ್ರೀಬಸವೇಶ್ವರ ಸಂಯುಕ್ತ ಪ್ರೌಢ ಶಾಲೆ ಹಾಗೂ ಬಳಗನೂರಿನ ಶ್ರೀಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮಾಡಿ ಹೈ ಸ್ಕೂಲ್ ಮತ್ತು ಕಾಲೇಜ್ ಖೋ ಖೋ ಆಟದಲ್ಲಿ ಭಾಗವಹಿಸಿ ಶ್ರೀ ಬಸವರಾಜ ಯಾದಗಿರಿ ದೈಹಿಕ ಶಿಕ್ಷಕರು ಅವರಿಂದ ತರಬೇತಿಯನ್ನು ಪಡೆದು ವಿಭಾಗ ಮಟ್ಟ ಹಾಗೂ ರಾಜ್ಯ ಮಟ್ಟ, ಮಿನಿ ಒಲಂಪಿಕ್ ಕ್ರೀಡಾಕೂಟ ಹಾಗೂ ಮೈಸೂರಿನಲ್ಲಿ ನಡೆದ ಮುಖ್ಯಮಂತ್ರಿ ಕಪ್,ಹಾಗೂ 2024ರಲ್ಲಿ ರಾಷ್ಟ್ರಮಟ್ಟದ 6ಜನ ಕ್ರೀಡಾಪಟುಗಳು ಆಡುವ ಅಲ್ಟಿಮೇಟ್ ಖೋ ಖೋ ಕ್ರೀಡಾಕೂಟದ ವರೆಗೂ ಆಡಿದ ಕ್ರೀಡಾಪಟುವಾಗಿದ್ದರು… ಇತ್ತೀಚಿಗೆ ನಡೆದ ಸೀನಿಯರ್ ರಾಜ್ಯ ಮಟ್ಟದ ಅಮೇಚೂರ್ ಖೋ ಖೋ ಚಾಂಪಿಯನ್ ಶಿಪ್ ನಲ್ಲಿ,,ರಾಜ್ಯ ಅಮೇಚೂರ್ ಖೋ ಖೋ ಅಸೋಸಿಯೆಷನ್ ಮಸ್ಕಿ ಸಂಸ್ಥೆಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರ ತನು, ಮನ, ಧನದ ಸಹಕಾರ ಮತ್ತು ಪ್ರೋತ್ಸಾಹದಿಂದ ರಾಜ್ಯ ಮಟ್ಟದ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು, ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾವಳಿಗಳಿಗೆ ಆಯ್ಕೆಯಾಗಿ,,ಮಸ್ಕಿ ಅಮೇಚೂರ್ ಖೋ ಖೋ ಸಂಸ್ಥೆಯ ಮತ್ತು ತಂದೆ,ತಾಯಿಯ ಹಾಗೂ ಬಳಗನೂರಿನ ಕೀರ್ತಿಯನ್ನು ಹೆಚ್ಚಿಸಿದ್ದಾನೆ… ಈ ಕ್ರೀಡಾಪಟುವಿಗೆ ಊರಿನ ಗುರು ಹಿರಿಯರು ಹಾಗೂ ಸ್ನೇಹಿತರು ಕ್ರೀಡಾಭಿಮಾನಿಗಳು ಸಂತಸ ವ್ಯಕ್ತಪಡಿಸಿ ಈ ಕ್ರೀಡಾಪಟು ಇನ್ನು ಅಂತಾರಾಷ್ಟ್ರೀಯ ಮಟ್ಟದ ವರೆಗೂ ಬೆಳೆಯಲಿ ಎಂದು ಆಶೀಷಿ,,,ಅಭಿನಂದನೆಗಳು ತಿಳಿಸಿದ್ದಾರೆ…
