ತಾಳಿಕೋಟಿ: ತಾಲೂಕಿನ ಮಾಜಿ ಸೈನಿಕರಿಗೆ ಪಟ್ಟಣದಲ್ಲಿ ನಿವೇಶನ ಅಥವಾ ವಸತಿಯನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ತಾಳಿಕೋಟಿ ತಾಲೂಕ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ(ರಿ)ದ ಪದಾಧಿಕಾರಿಗಳು ತಹಸಿಲ್ದಾರ್ ಡಾ.ವಿನಯಾ ಹೂಗಾರ ಇವರಿಗೆ ಮಂಗಳವಾರ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀಪಾಲ ಸಂಗಮಿ ಮಾತನಾಡಿ ನಮ್ಮ ಕ್ಷೇಮಾಭಿವೃದ್ಧಿ ಸಂಘದಲ್ಲಿ 43 ಮಾಜಿ ಸೈನಿಕರು ಹಾಗೂ 6 ವೀರ ನಾರಿಯರು ಒಟ್ಟು 49 ಸದಸ್ಯರಿದ್ದು ಇಲ್ಲಿಯವರೆಗೆ ನಮಗೆ ಸರ್ಕಾರದಿಂದ ಯಾವುದೇ ನಿವೇಶನ ಅಥವಾ ವಸತಿಯಾಗಲಿ ಮಂಜೂರು ಆಗಿರುವುದಿಲ್ಲ ಆದ ಕಾರಣ ಈ ನಮ್ಮ ಮನವಿಯನ್ನು ಮನ್ನಿಸಿ ಆದಷ್ಟು ಬೇಗ ಮಂಜೂರು ಮಾಡಿಸಲು ಕ್ರಮ ವಹಿಸಬೇಕೆಂದು ತಿಳಿಸಿದರು. ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ತಹಸಿಲ್ದಾರ್ ಡಾ.ವಿನಯಾ ಹೂಗಾರ ಅವರು ಸದರಿ ಮನವಿಯನ್ನು ಪರಿಶೀಲಿಸಿ ಕ್ರಮ ವಹಿಸುತ್ತೇನೆ ಎಂದರು. ಈ ಸಮಯದಲ್ಲಿ ಸಂಘದ ಉಪಾಧ್ಯಕ್ಷ ಶಿವಪ್ಪ ಎಸ್ ಅಂಗಡಿ,ಕಾರ್ಯದರ್ಶಿ ಬಾಪುಗೌಡ ಪಾಟೀಲ, ಸದಸ್ಯರಾದ ಶಂಕರಗೌಡ ನರಸಲಗಿ,ಬೋರಮ್ಮ ಕುಂಬಾರ, ನಿಂಗಮ್ಮ ಬಿರಾದಾರ, ಶಂಕರಗೌಡ ನಾಗರಾಳ, ಶಿವಭಾಯಿ ವರ್ಚಗಲ್, ಹುಸೇನಬಿ ಎಂ.ಪೊಲೀಸ್, ಎಸ್.ಬಿ.ಸಜ್ಜನ, ಬಿ.ಎಸ್.ಹರನಾಳ, ಶಿವಾನಂದ ಮಠ, ಎಸ್.ಜಿ.ಬಿರಾದಾರ, ಕೆ.ಎಚ್.ಮುರಾದಖಾನಿ, ಎಸ್.ಬಿ. ಅಮಲ್ಯಾಳ, ವಿಜಯಕುಮಾರ ಚೌವಾಣ ಇದ್ದರು.

