ತಾಳಿಕೋಟೆ: ಹಂಡೇ ವಜೀರ ಸಮಾಜದ ರಾಜ್ಯ, ಜಿಲ್ಲಾ, ತಾಲ್ಲೂಕು, ಮಹಿಳಾ ಮತ್ತು ಯುವ ಘಟಕದ ಪದಾಧಿಕಾರಿಗಳ ಸಹಯೋಗದಲ್ಲಿ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೇವಜೀರ ಸಮಾಜದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಇದೇ ಫೆ1 ರಂದು ಸ್ಥಳೀಯ ಖಾಸ್ಗತೇಶ್ವರ ಸಭಾಭವನದಲ್ಲಿ ಬೆಳಿಗ್ಗೆ 11.00ಗಂಟೆಗೆ ನೆರವೇರಲಿದೆ ಎಂದು ಹಂಡೇವಜೀರ ಸಮಾಜದ ರಾಜ್ಯಾಧ್ಯಕ್ಷ ಡಾ.ಎಸ್.ಎಸ್.ಪಾಟೀಲ ತಿಳಿಸಿದರು. ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ಹಂಚಿಕೊಂಡು ಮಾತನಾಡಿ
ಸಮಾರಂಭದಲ್ಲಿ 2024-2 5ನೆಯ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಕಳೆದ 10 ವರ್ಷಗಳಿಂದ ವಿವಿದ ತಾಲ್ಲೂಕುಗಳಲ್ಲಿ ಸಮಾಜದ ಜಾಗೃತಿ ಮತ್ತು ಮಹಾಸಬಾಗಳನ್ನು ಮಾಡುತ್ತ ಬಂದಿದ್ದೇವೆ. ತಾಳಿಕೋಟೆ ಹೊಸ ತಾಲ್ಲೂಕು ರಚನೆಯಾದ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರವನ್ನು ಆಯೋಜಿಸಲಾಗಿದೆ.
ಸಮಾರಂಭದಲ್ಲಿ ಸಾನ್ನಿದ್ಯವನ್ನು ಹಿರೂರು ಅನ್ನದಾನೇಶ್ವರ ಸಂಸ್ಥಾನಮಠದ ಪಟ್ಟಾಧಿಕಾರಿ ಜಯಗುರುಸಿದ್ದೇಶ್ವರ ಸ್ವಾಮೀಜಿ, ತಾಳಿಕೋಟೆಯ ಖಾಸ್ಗತೇಶ್ವರಮಠದ ಪೀಠಾಧಿಪತಿ ಸಿದ್ಧಲಿಂಗದೇವರು, ಕರಭಂಟನಾಳ ಹಿರೇಮಠದ ಶಿವಕುಮಾರಸ್ವಾಮೀಜಿ, ವಹಿಸುವರು. ಅದ್ಯಕ್ಷತೆಯನ್ನು ತಾಳಿಕೋಟೆ ತಾಲ್ಲೂಕು ಘಟಕದ ಅಧ್ಯಕ್ಷ ರಾಮನಗೌಡ ಬಿರಾದಾರ ವಹಿಸುವರು. ಉದ್ಘಾಟಕರಾಗಿ ಶಾಸಕ ಸಿ.ಎಸ್.ನಾಗಡೌಡ ಅಪ್ಪಾಜಿ, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕರುಗಳಾದ ಎ.ಎಸ್.ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ, ಪ್ರಮುಖರಾದ ಆರ್.ಎಸ್.ಪಾಟೀಲ ಕೂಚಬಾಳ, ಪ್ರಭು ದೇಸಾಯಿ ಹಾಗೂ ಅತಿಥಿಗಳಾಗಿ ಸಮಾಜದ ರಾಜ್ಯಾಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿದ ತಾಲ್ಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾದ್ಯಕ್ಷ ಎಸ್.ಜಿ.ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಪಾಟೀಲ, ಜಿಲ್ಲಾ ಘಟಕದ ಅಧ್ಯಕ್ಷ ಸಂಗನಗೌಡ ಕರಬಂಟನಾಳ, ಮುದ್ದೇಬಿಹಾಳ ತಾಲೂಕು ಅಧ್ಯಕ್ಷ ಎಂ.ಬಿ.ಬಿರಾದಾರ ವಕೀಲರು, ಸ್ಥಳೀಯ ತಾಲ್ಲೂಕು ಘಟಕದ ಅಧ್ಯಕ್ಷ ರಾಮನಗೌಡ ಬಿರಾದಾರ, ಬ.ಬಾಗೇವಾಡಿ ತಾಲೂಕ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಮುತ್ತು ಬಿರಾದಾರ(ಚಬನೂರ), ನಿಂಗನಗೌಡ ಚೌದರಿ(ತುಂಬಗಿ), ಅವ್ವನಗೌಡ ಗೋನಾಳ, ಬಸನಗೌಡ ನಾರಾ ಪಾಟೀಲ, ದೇವೇಂದ್ರ ಗೋನಾಳ, ಎಸ್ ಬಿ ಸಾಸನೂರ, ಶಾಂತಗೌಡ ಪಾಟೀಲ, ವೀರೇಶ ಹಂಡರರ್ಗಲ್, ಸಂಗಮೇಶ ಪಾಟೀಲ, ಡಿ ಬಿ ಪಾಟೀಲ, ಪ್ರಕಾಶ ಬಿರಾದಾರ, ಅರವಿಂದ್ ಬಿರಾದಾರ, ಮಲ್ಲಿಕಾರ್ಜುನ ಚೌದ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
