ಮಾನ್ವಿ:ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸ್ಕೌಟ್ ಗೈಡ್ ತರಬೇತಿ ಸಹಕಾರಿ ಎಂದು ಜಿಲ್ಲಾ ಸಹಾಯಕ ಆಯುಕ್ತ ಸ್ಕೌಟ್ ಮಲ್ಲನಗೌಡ ನುಡಿದರು.ಅವರು ಮಾನ್ವಿ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕಾ ಮಟ್ಟದ ಸ್ಕೌಟ್ ಗೈಡ್ ಸಮಾವೇಶ ಹಾಗೂ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ಸಭೆಯ ಅಧ್ಯಕ್ಷತೆಯನ್ನು ಬಲರಾಮ ಕೃಷ್ಣ ಅವರು ವಹಿಸಿದ್ದರು.ವೇದಿಕೆ ಮೇಲೆ ಕಾರ್ಯದರ್ಶಿ ರಾಮಲಿಂಗಪ್ಪ, ಸಲೀಂ, ಚಾಂದ್ ಪಾಷಾ ಅರುಣ್ ಚಂದ,ಜಿಲ್ಲಾ ಸ್ಕೌಟ್ ಆಯುಕ್ತ ಬಸವರಾಜ್, ಗದಗಿನ ,ಉಪಸ್ಥಿತರಿದ್ದರು.ಪ್ರಾಸ್ತಾವಿಕ ನುಡಿಯನ್ನು ಜಿಲ್ಲಾ ಸಂಘಟಕ್ಕ ಅಂಬಣ್ಣ ನಾಯಕ್ ಮ್ಯಾಕಲ್ ಮಾತನಾಡಿದರು.ಮಾನ್ವಿ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಸೈಯದ್ ಮುಜಾತನ ಖಾದ್ರಿ, ಸಿರವಾರದ ವೆಂಕಟ ರೆಡ್ಡಿ ಬಲಕಲ್,ನಾಗರತ್ನ ದೇಸಾಯಿ,.ಶಿಬಿರದ ನಾಯಕರಾಗಿ ಚಂದ್ರಶೇಖರ್, ನಾಯಕಿ ಆಗಿ ರಜನಿ,ಪರಿಮಳ,ಸೌಮ್ಯ ಕಾರ್ಯ ನಿರ್ವಹಿಸಿದರು.

Leave a Reply

Your email address will not be published. Required fields are marked *