ಮಸ್ಕಿ:ಪಟ್ಟಣದ 06ನೇ ವಾರ್ಡನಲ್ಲಿ ವೋಟ್ ಚೋರ್, ಗದ್ದಿ ಚೋಡ್ “ಅಭಿಯಾನ ಕಾರ್ಯಕ್ರಮ ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಎಂ.ಅಮರೇಶ ಮಾತನಾಡಿ ಕೇಂದ್ರ ಸರ್ಕಾರವು ಕಳದ 10 ವರ್ಷಗಳಿಂದ ಮತಗಳ್ಳತನದ ಮೂಲಕ ದೇಶದಲ್ಲಿ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದ್ದು ಇದು ಪ್ರಜಾಪ್ರಭುತ್ವದ ಬುನಾದಿಗೆ ಧಕ್ಕೆ ತರುವ ಬೆಳವಣಿಗೆಯಾಗಿದೆ. ಕೇಂದ್ರ ಬಿಜೆಪಿ ಸರ್ಕಾರವು ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊಂಡು ಮತಗಳ್ಳತನ ಮಾಡುತ್ತಿರುವುದರ ವಿರುದ್ಧವಾಗಿ ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಹಮ್ಮಿಕೊಂಡಿರುವ “ವೋಟ್ ಚೋರ್ ಗದ್ದಿ ಚೋಡ್” ಸಹಿ ಸಂಗ್ರಹವನ್ನು ಪ್ರತಿ ಬೂತ್ ಮಟ್ಟದಲ್ಲಿ ಅಭಿಯಾನ ಮಾಡಲಾಯಿತು.
ನಂತರ ಮಸ್ಕಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಡಿ.ಚಿಗರಿ ಮಾತನಾಡಿ ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ದೇಶದಲ್ಲಿ ಬಿಜೆಪಿ ಸರ್ಕಾರವು ಮತಗಳ್ಳತನ ಮಾಡುವ ಮೂಲಕ ಸಂವಿಧಾನದ ಆಶಯಗಳನ್ನು ಕೊಂದು ಹಾಕುತ್ತಿದೆ. ಪವಿತ್ರವಾದ ನಮ್ಮ ಮತದಾನದ ಹಕ್ಕನ್ನು ಬಿಜೆಪಿ ಪಕ್ಷ ಕಸಿಯುವ ಕೆಲಸ ಮಾಡುತ್ತಿದ್ದು, ನಾವೆಲ್ಲ ಜಾಗೃತರಾಗಿ ಕೇಂದ್ರ ಸರ್ಕಾರದ ಕುಟಿಲ ನೀತಿಯನ್ನು ವಿರುದ್ಧವಾಗಿ ಸಹಿ ಸಂಗ್ರಹದ ಮೂಲಕ ವಿರೋಧಿಸಬೇಕು ಎಂದರು.ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಅಬ್ದುಲ್ ಗನಿಸಾಬ, ವೀರೇಶ ಆನೆಹೊಸರು, ಖಾಜಿಹುಸೇನ್, ಮಲ್ಲಪ್ಪ ಉಪಸ್ಥಿತಿ ಇದ್ದರು.

Leave a Reply

Your email address will not be published. Required fields are marked *