ಲಿಂಗಸೂಗೂರು ತಾಲೂಕಿನ ಅಜಾತಶತ್ರು ಹಿರಿಯ ಮುತ್ಸದ್ದಿ, ಸಮಾಜಸೇವೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜನಾಬ್ ಲಾಲ್ ಅಹ್ಮದ್ ಸಾಹೇಬ್ರ ಜನ್ಮದಿನವನ್ನು ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರು ತಾಲೂಕು ಕಮಿಟಿಯ ವತಿಯಿಂದ ಇಂದು ಅದ್ದೂರಿಯಾಗಿ ಹಾಗೂ ಸಾರ್ಥಕವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಲಾಲ್ ಅಹ್ಮದ್ ಸಾಹೇಬ್ರವರು ಧರ್ಮ, ಜಾತಿ, ಪಕ್ಷಭೇದವಿಲ್ಲದೆ ಸಮಾಜದ ಎಲ್ಲ ವರ್ಗಗಳಿಗಾಗಿ ದುಡಿದ ನಾಯಕರು ಎಂದು ಶ್ಲಾಘಿಸಿದರು. ಅವರ ಜೀವನವೇ ಯುವ ಪೀಳಿಗೆಗೆ ಪ್ರೇರಣೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಭೂಪನಗೌಡ ಪಾಟೀಲ್ ಕರಡಕಲ್, ವಿಧಾನ ಪರಿಷತ್ ಸದಸ್ಯರ ಆಪ್ತ ಸಹಾಯಕ ಚನ್ನಾರೆಡ್ಡಿ, ಲಾಲ್ ಅಹ್ಮದ್ ಮನೆತನದ ಸದಸ್ಯರು ಉಪಸ್ಥಿತರಿದ್ದು, ಶುಭಾಶಯಗಳನ್ನು ತಿಳಿಸಿದರು.
ಅಂಜುಮನ್ ಲಿಂಗಸೂಗೂರು ತಾಲೂಕು ಕಮಿಟಿಯ ಗೌರವಾಧ್ಯಕ್ಷರಾದ ಅನ್ಸರ್ ಭಾಯಿ, ಅಧ್ಯಕ್ಷರಾದ ಹುಸೇನ್ ಭಾಷಾ, ಉಪಾಧ್ಯಕ್ಷರಾದ ಮುಸ್ತಫಾ, ಪ್ರಧಾನ ಕಾರ್ಯದರ್ಶಿಯಾದ ಅಮೀನ್ ಭಾಯಿ ಸೇರಿದಂತೆ ಆರಿಪ್, ಸಾಹಿಲ್, ಹುಸೇನ್, ಇಲಾಹಿ, ಸಲೀಂ, ಅಬ್ದುಲ್ಲ ರಜಾಕ್, ಆದಿಲ್, ಲಾಲ್ ಸಾಬ್, ಹಜರತ್, ಗೌಸ್ ಖುರೇಶಿ, ಬಂದೇನವಾಜ್, ಅಬ್ಬಾಸ್, ಮೌಲಾ ಭಾಯಿ, ವಸಿಂ, ಮುರ್ತುಜ, ರಫಿ ಭಾಯಿ, ಇರ್ಫಾನ್ ಮತ್ತಿತರರು ವೇದಿಕೆ ಹಂಚಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಅಂಜುಮನ್ ಕಮಿಟಿಯ ಪದಾಧಿಕಾರಿಗಳು, ಬೆಂಬಲಿಗರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದು, ಲಾಲ್ ಅಹ್ಮದ್ ಸಾಹೇಬ್ರ ದೀರ್ಘಕಾಲದ ಸಾಮಾಜಿಕ, ಶೈಕ್ಷಣಿಕ ಮತ್ತು ಸಾರ್ವಜನಿಕ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಲಾಯಿತು.

