ಸಿಂಧನೂರು, ಜ 11
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (Special Intensive Revision – SIR) ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಿಂಧನೂರು ನಗರದ ಟೌನ್ ಹಾಲ್‌ನಲ್ಲಿ ಸಾಧಕ–ಬಾಧಕ ಕುರಿತು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ನಗರದ ಖ್ಯಾತ ಮಕ್ಕಳ ತಜ್ಞರಾದ ಡಾ. ಶಿವರಾಜ್ ಪಾಟೀಲ್ ಅವರು ಹಲಗೆ ಬಡೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಮತದಾರರ ಪಟ್ಟಿ ದೇಶದ ಪ್ರಜಾಪ್ರಭುತ್ವದ ಬಲಿಷ್ಠ ಅಡಿಪಾಯವಾಗಿದ್ದು, ಯಾವುದೇ ಅರ್ಹ ನಾಗರಿಕ ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂದು ತಿಳಿಸಿದರು.
ನಂತರ ಉಪನ್ಯಾಸ ನೀಡಲು ಆಗಮಿಸಿದ ಶಿವ ಸುಂದರ್ ಅವರು ಮಾತನಾಡಿ ಸಂವಾದದಲ್ಲಿ SIR .ದಾಖಲೆಗಳ ಕೊರತೆ, ಬಡ ಹಾಗೂ ವಲಸೆ ಕಾರ್ಮಿಕರಿಗೆ ಎದುರಾಗುವ ಸಮಸ್ಯೆಗಳು, ನಾಗರಿಕತ್ವ ಪರಿಶೀಲನೆ ಕುರಿತ ಗೊಂದಲಗಳು ಸೇರಿದಂತೆ ಬಾಧಕ ಅಂಶಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.
SIR ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಬಡ, ವಲಸೆ ಹಾಗೂ ಅಂಚಿನ ಸಮುದಾಯಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಮತದಾನ ಹಕ್ಕಿಗೆ ಅಪಾಯ
SIR ಪ್ರಕ್ರಿಯೆಯಲ್ಲಿ ದಾಖಲೆಗಳ ಕೊರತೆಯಿಂದ ನೈಜ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ. ಇದು ಸಂವಿಧಾನಾತ್ಮಕ ಮತದಾನ ಹಕ್ಕಿಗೆ ಧಕ್ಕೆಯಾಗಬಹುದು,. ಬಡ ಮತ್ತು ವಲಸೆ ಕಾರ್ಮಿಕರಿಗೆ ಸಂಕಷ್ಟ
ಆಧಾರ್, ಜನನ ಪ್ರಮಾಣಪತ್ರ, ವಾಸಸ್ಥಳದ ದಾಖಲೆಗಳಿಲ್ಲದ ಬಡವರು ಹಾಗೂ ವಲಸೆ ಕಾರ್ಮಿಕರು ತಮ್ಮ ಹೆಸರು ಉಳಿಸಿಕೊಳ್ಳಲು ಕಷ್ಟಪಡುವ ಪರಿಸ್ಥಿತಿ ಉಂಟಾಗಿದೆ. , NRC ಹಿಂಬಾಗಿಲು ಎಂಬ ಆತಂಕ
SIR ಅನ್ನು “ಹಿಂಬಾಗಿಲು NRC” ಆಗಿ ಬಳಸುವ ಪ್ರಯತ್ನ ಎನ್ನುವ ಭಯ ಜನರಲ್ಲಿ ಹೆಚ್ಚಿದೆ. ನಾಗರಿಕತ್ವ ಪ್ರಶ್ನೆಯಾಗಿ ಮಾರ್ಪಡುವ ಅಪಾಯವಿದೆ ಎಂಬ ಆರೋಪಗಳಿವೆ., ಅಧಿಕಾರಿಗಳ ಅತಿಯಾದ ವಿವೇಕಾಧೀನತೆ
ಬಿಎಲ್ಒ/ಅಧಿಕಾರಿಗಳಿಗೆ ಹೆಚ್ಚುವರಿ ಅಧಿಕಾರ ನೀಡುವುದರಿಂದ ಪಕ್ಷಪಾತ, ತಪ್ಪು ನಿರ್ಧಾರಗಳ ಸಾಧ್ಯತೆ ಇದೆ ಎಂಬ ಟೀಕೆ ಕೇಳಿಬರುತ್ತಿದೆ.ಸಮರ್ಪಕ ಜನಜಾಗೃತಿ ಕೊರತೆ
SIR ಕುರಿತು ಸರಿಯಾದ ಮಾಹಿತಿ ಜನರಿಗೆ ತಲುಪಿಲ್ಲ. ಅಜ್ಞಾನದಿಂದಲೇ ಹಲವರು ತಮ್ಮ ಹೆಸರು ಕೈಬಿಡಲ್ಪಡುವ ಭೀತಿಯಲ್ಲಿದ್ದಾರೆ. ಕಾಲಮಿತಿ ಮತ್ತು ಪ್ರಕ್ರಿಯೆಯ ಒತ್ತಡ
ಕಡಿಮೆ ಅವಧಿಯಲ್ಲಿ ದಾಖಲೆ ಸಲ್ಲಿಸುವ ಒತ್ತಡ ಜನಸಾಮಾನ್ಯರಿಗೆ ಅಸಾಧ್ಯವಾಗುತ್ತಿದೆ. . ಪ್ರಜಾಪ್ರಭುತ್ವಕ್ಕೆ ಧಕ್ಕೆ
ಮತದಾರರ ಸಂಖ್ಯೆಯ ಇಳಿಕೆಯಿಂದ ಚುನಾವಣೆಗಳ ನ್ಯಾಯಸಮ್ಮತತೆ ಮತ್ತು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಧಕ್ಕೆಯಾಗಬಹುದು ಎಂಬ ಆತಂಕ ಇದೆ.
ವಕ್ತಾರರು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮಾನವೀಯ ದೃಷ್ಟಿಕೋನ ಬಹಳ ಅಪಾಯಕಾರಿ , ಯಾವುದೇ ನಾಗರಿಕರ ಹಕ್ಕುಗಳಿಗೆ ಧಕ್ಕೆ ಉಂಟಾಗದಂತೆ ಸರ್ಕಾರ ಹಾಗೂ ಚುನಾವಣಾ ಆಯೋಗ ಕ್ರಮ ವಹಿಸಬೇಕು SIR ಕಾಯ್ದೆ ಸವಿಧಾನದ ವಿರುದ್ಧವಾಗಿದೆ ಕೂಡಲೇ ಈ ಕಾಯ್ದೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ
ಚುನಾವಣಾ ಆಯೋಗ ಒಂಬತ್ತು ರಾಜ್ಯ ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮಹತ್ವದ ಘಟ್ಟಕ್ಕೆ ಬಂದಿದೆ. ಈವರೆಗೆ ಪ್ರಕಟಗೊಂಡ ಕರಡು ಪಟ್ಟಿಯಲ್ಲಿ ಒಟ್ಟಾರೆ 6.5 ಮತದಾರರ ಹೆಸರನ್ನು ಕೈಬಿಡಲಾಗಿದೆ.
ಆರಂಭದ ವೇಳೆ 9 ರಾಜ್ಯ ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 50.90 ಕೋಟಿ ಮತದಾರರಿದ್ದರು. ಕರಡು ಪಟ್ಟಿ ಪ್ರಕಟಿಸಿದ ಬಳಿಕ ಮತದಾರರ ಸಂಖ್ಯೆ 44.40 ಕೋಟಿಗೆ ಇಳಿಕೆಯಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಬಿಹಾರದಲ್ಲಿ ಮೊದಲ ಹಂತದಲ್ಲಿ ನಡೆದಿದ್ದ ಎಸ್‌ಐಆರ್ ಪ್ರಕ್ರಿಯೆಯಲ್ಲಿ 65 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು, ಕರಡು ಪಟ್ಟಿಯಿಂದ ತೆಗೆದುಹಾಕಿದವರ ಹೆಸರುಗಳನ್ನು ಎಎಸ್‌ಡಿ ಅಥವಾ ಗೈರುಹಾಜರಿ, ಸ್ಥಳಾಂತರ ಮತ್ತು ಮೃತ/ನಕಲು ವರ್ಗದಲ್ಲಿ ಇರಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಎಸ್‌ಐಆರ್ ನಡೆಯುತ್ತಿರುವ ಹೆಚ್ಚಿನ ರಾಜ್ಯಗಳಲ್ಲಿ 2002 ಮತ್ತು 2004ರ ನಡುವೆ ಮತದಾರರ ಪಟ್ಟಿಯ ಕೊನೆಯ ಎಸ್‌ಐಆ‌ರ್ ನಡೆದಿತ್ತು. ಅಸ್ಸಾಂನಲ್ಲಿ ಮತದಾರರ ಪಟ್ಟಿಯ ಪ್ರತ್ಯೇಕ ವಿಶೇಷ ಪರಿಷ್ಕರಣೆ ನಡೆಯುತ್ತಿದೆ.
ಯುಪಿಯಲ್ಲಿ ಅತ್ಯಧಿಕ

ಉತ್ತರ ಪ್ರದೇಶದಲ್ಲಿ ಈ ಹಿಂದೆ 15.44 ಕೋಟಿ ಮತದಾರರಿದ್ದರು. ಇವರಲ್ಲಿ ಶೇ. 18.70 ಅಥವಾ 2.89 ಕೋಟಿ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಹೀಗಾಗಿ ಪ್ರಸ್ತುತ 12.55 ಕೋಟಿ ಮತದಾರರಷ್ಟೇ ಪಟ್ಟಿಯಲ್ಲಿ ಉಳಿದುಕೊಂಡಿದ್ದಾರೆ. ಸಾವು, ಶಾಶ್ವತ ವಲಸೆ ಅಥವಾ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಣಿ ಮಾಡಿದ್ದರಿಂದಾಗಿ ಇಷ್ಟು ಪ್ರಮಾಣದ ಜನರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು
ಅಂಡಮಾನ್ ಮತ್ತು ನಿಕೋಬಾರ್ ໖. 16.72, 202600 ಚುನಾವಣೆ ನಡೆಯಲಿರುವ ಕೇರಳದಲ್ಲಿ ಶೇ. 8.64, ಪಶ್ಚಿಮ ಬಂಗಾಳದಲ್ಲಿ ಶೇ. 7.6, ತಮಿಳುನಾಡಿನಲ್ಲಿ ಶೇ 15.18 ಮತ್ತು ಪುದುಚೇರಿಯಲ್ಲಿ ಶೇ. 10.12 ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ. ಎಂದು ತಿಳಿಸಿದರು
“ಮತದಾನ ಹಕ್ಕು ನಮ್ಮ ಮೂಲ ಹಕ್ಕು – SIR ಹಿಂಪಡೆ!”
“ದಾಖಲೆ ಇಲ್ಲದಿದ್ದರೆ ಮತವಿಲ್ಲವೇ?”
“SIR = ಹಿಂಬಾಗಿಲು NRC – ನಾವು ಒಪ್ಪುವುದಿಲ್ಲ!”
“ಬಡವರ ಮತ ಹಕ್ಕಿಗೆ ಕತ್ತರಿ ಬೇಡ!” SIR ಪ್ರಕ್ರಿಯೆಯಿಂದ ಲಕ್ಷಾಂತರ ನೈಜ ಮತದಾರರು ಹೊರಗುಳಿಯುವ ಆತಂಕ
ಜನಪರ ಚರ್ಚೆ ಇಲ್ಲದೆ ಜಾರಿಗೊಳಿಸಿದ ಕ್ರಮ
ತಕ್ಷಣ ಪ್ರಕ್ರಿಯೆ ಸ್ಥಗಿತಕ್ಕೆ ಆಗ್ರಹ
ಎಲ್ಲ ಪಕ್ಷಗಳು, ಸಂಘಟನೆಗಳು ಒಂದಾಗಬೇಕೆಂಬ ಕರೆ ಜನಾಂದೋಲನದ ಮಾರ್ಗಗಳು
ಸಂವಾದ ಸಭೆಗಳು
ತಹಶೀಲ್ದಾರ್ / ಡಿಸಿ ಕಚೇರಿ ಮುಂದೆ ಮನವಿ
ಸಹಿ ಸಂಗ್ರಹ ಅಭಿಯಾನ
ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುವದು ಎಂದು ತಿಳಿಸಿದರು
ಈ ಸಂವಾದ ಕಾರ್ಯಕ್ರಮದಲ್ಲಿ ಡಾಕ್ಟರ್ ಶಿವರಾಜ್ ಪಾಟೀಲ್, ಡಿ ಎಚ್ ಕಂಬಳಿ, ಚಂದ್ರಶೇಖರ್ ಗೊರೆಬಾಳ್, ಮುನೇಶ್ ಜಾಲವಾಡಗಿ, ವಿವಿಧ ಸಂಘಟನೆಗಳ ಮುಖಂಡರು, ವಕೀಲರು, ಪ್ರಾಧ್ಯಾಪಕರು, ಸಮಾಜಸೇವಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *