ಮಸ್ಕಿ ಪಟ್ಟದಲ್ಲಿರುವ ತಹಸೀಲ್ದಾರರ ಕಚೇರಿಯಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ತಹಸೀಲ್ದಾರ ಮಂಜುನಾಥ ಭೋಗವತಿ 12ನೇ ನೇ ಶತಮಾನದ ಶರಣರಲ್ಲಿ ಶ್ರೀ ಸಿದ್ದರಾಮೇಶ್ವರರು ಒಬ್ಬರಾಗಿದ್ದರು. ಇವರು ಕರ್ಮಯೋಗಿ ಮತ್ತು ಶಿವಯೋಗಿಯಾಗಿ ಕಲ್ಯಾಣ ಕ್ರಾಂತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿಕೊಂಡು, ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು . ತಮ್ಮ ವಚನಗಳಲ್ಲಿ ಕಪಿಲ ಸಿದ್ಧ ಮಲ್ಲಿಕಾರ್ಜುನ ಅಂಕಿತ ನಾಮದಿಂದ ಪ್ರಸಿದ್ಧರಾಗಿದ್ದಾರೆ, ಇವರು ಸೋನ್ನಲಿಗೆಯನ್ನು ತಮ್ಮ ಕರ್ಮ ಕ್ಷೇತ್ರವಾಗಿಸಿಕೊಂಡಿದ್ದರು. ಇವರ ಸೇವೆ ಸಮಾಜಕ್ಕೆ ಅತ್ಯಂತ ಶ್ರೇಷ್ಠವಾಗಿದೆ ಇಂತಹ ಪುರುಷರ ಆದರ್ಶಗಳನ್ನು ನಾವು ಪಾಲಿಸಬೇಕೆಂದು ತಹಸೀಲ್ದಾರ ಮಂಜುನಾಥ ಭೋಗವತಿ ಹೇಳಿದರು. ಈ ಸಂದರ್ಭದಲ್ಲಿ ಶಿರೆಸ್ತೆದಾರ ಗುರುಲಿಂಗಯ್ಯ ಹಾಗೂ ಭೋವಿ ಸಮಾಜದ ಮುಖಂಡರು, ಕಚೇರಿ ಸಿಬ್ಬಂದಿಗಳು ಇದ್ದರು.

