ಲಿಂಗಸಗೂರ : ಜ 15 . ತಾಲೂಕಿನ ನಾರಾಯಣಪುರ ಬಲದಂಡೆ ವಿತರಣಾ ಕಾಲುವೆ ಹಾಗೂ ಉಪ ಕಾಲುವೆಗಳ ಕಾಮಗಾರಿ ಸಂಪೂರ್ಣಗೊಳಿಸದೇ ಆತುರದಲ್ಲಿ ಅವೈಜ್ಞಾನಿಕವಾಗಿ ಸ್ಮಾಡಾ ಗೇಟ್ ಅಳವಡಿಸಲು ಮುಂದಾಗಿರುವ ಅಧಿಕಾರಿಗಳು ಅದನ್ನು ತಕ್ಷಣ ಕೈಬಿಟ್ಟು ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕ ಅಧ್ಯಕ್ಷ ದುರ್ಗಾ ಪ್ರಸಾದ್‌ ರೆಡ್ಡಿ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು.

ನಿಯಮದ ಪ್ರಕಾರ ವಿತರಣಾ ಕಾಲುವೆ ಹಾಗೂ ಉಪ ಕಾಲುವೆಗಳ ನವೀಕರಣ ಕಾಮಗಾರಿ ಪೂರ್ಣಗೊಳಿಸದ ಮೇಲೆ ಸ್ಕಾಡಾ ಗೇಟ್ ಅಳವಡಿಸಬೇಕು. ಆದರೆ, ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಗುತ್ತಿಗೆದಾರರ ಜೊತೆ ಶಾಮೀಲಾಗಿ ಸರ್ಕಾರದ ಹಣ ಲೂಟಿ ಮಾಡುವ
ಹುನ್ನಾರ ನಡೆಸಿದ್ದಾರೆ.
ಅವೈಜ್ಞಾನಿಕ ಕಾಮಗಾರಿಯಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದು ಆರೋಪಿಸಿದರು.
ಕೂಡಲೇ ಸ್ಕಾಡಾ ಗೇಟ್ ಅಳವಡಿಕೆಯ ಕಾಮಗಾರಿಯನ್ನು ನಿಲ್ಲಿಸಿ. ಮೊದಲು ಉಪ ಕಾಲುವೆ ಹಾಗೂ ವಿತರಣೆ ಕಾಲುವೆಗಳ ನವೀಕರಣ ಕಾಮಗಾರಿ ಪೂರ್ಣಗೊಳಿಸಿದ ನಂತರ ಸ್ವಾಡಾ ಗೇಟ್ ಅಳವಡಿಸಬೇಕು, ನಮ್ಮ ಮನವಿಗೆ ಸಂದಿಸದಿದ್ದರೆ ತಮ್ಮ ಕಾರ್ಯಾಲಯದ ಮುಂದೆ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿರುವರು.
ಈ ಸಂದರ್ಭದಲ್ಲಿ
ಸದಾನಂದ, ಬಸವರಾಜ, ಮಹಮ್ಮದ್ ಖಜಾ, ನಾಗಪ್ಪ ಪುಣೆದ್, ಲಾಲ್ ಸಾಬ್, ಹನುಮಂತ ಹೊಳೆಪ್ಪ, ರಾಮಣ್ಣ ಆರಿಕೇರಾ, ಅಮರೇಶ ಭೂಪೂರ, ಹುಲಗಪ್ಪ, ರಂಗಪ್ಪ, ತಿಮ್ಮಣ್ಣ ನಾಯಕ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *