ಮಸ್ಕಿ: ಶಿವಯೋಗಿ ಸಿದ್ದರಾಮೇಶ್ವರ 853ನೇ ಜಯಂತಿಯನ್ನು ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕಾಡಳಿತದಿಂದ ಬುಧವಾರ ಆಚರಿಸಲಾಯಿತು.
ತಹಸೀಲ್ದಾರ್ ಮಂಜುನಾಥ ಭೋಗಾವತಿ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಜಯಂತಿಯನ್ನು ಆಚರಿಸಿದರು.
ಶಾಸಕರಿಂದ ಮಾಲಾರ್ಪಣೆ: ಶಿವಯೋಗಿ ಸಿದ್ದರಾಮೇಶ್ವರ ೮೫೪ನೇ ಜಯಂತ್ಸೋತ್ಸವ ಅಂಗವಾಗಿ ಪಟ್ಟಣದ ಸಿದ್ದರಾಮೇಶ್ವರ ವೃತದ ನಾಮಫಲಕಕ್ಕೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾಲಾರ್ಪಣಿ ಮಾಡಿ ನಂತರ ಮಾತನಾಡಿದ ಅವರು ೧೨ನೇ ಶತಮಾನದಲ್ಲಿ ಬಸವಾದಿ ಶರಣರೊಂದಿಗೆ ಕೈಜೋಡಿಸಿ ಸಾಮಾಜಿಕ ಸಮಾನತೆ, ಮಾನವೀಯತೆ ಮತ್ತು ಧರ್ಮನಿಷ್ಠ ಜೀವನದ ಸಂದೇಶವನ್ನು ಸಮಾಜಕ್ಕೆ ತಲುಪಿಸಲು ಶ್ರಮಿಸಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ.ಇಓ ಅಮರೇಶ ಯಾದವ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಪೂರ, ಗ್ಯಾರಂಟಿ ಯೋಜನೆ ಅಧ್ಯಕ್ಷ ಮೈಬುಸಾಬ ಮುದ್ದಪೂರ, ದುರುಗಪ್ಪ ಚಿಗರಿ ಸೇರಿದಂತೆ ಭೋವಿ ಸಮಾಜದ ಹಲವಾರು ಮುಖಂಡರು ಉಪಸ್ಥಿತರಿದ್ದರು.

