ಮಸ್ಕಿ: ರಾಜ್ಯದಲ್ಲಿ ಇತ್ತೀಚಿಗೆ ಅಂತರ್ಜಲ ಮಟ್ಟ ಕುಸಿಯುತ್ತಿದ್ದು ಆದ್ದರಿಂದ ಅಂತರ್ಜಲ ಹೆಚ್ಚಿಸುವ ಸಲುವಾಗಿ ಸಣ್ಣ ನೀರಾವರಿ ಇಲಾಖೆಯಿಂದ ಚೆಕ್ ಡ್ಯಾಮ್, ಏತ ನೀರಾವರಿ ಯೋಜನೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಹೇಳಿದರು.
ಮಸ್ಕಿ ವಿಧಾನಸಭಾ ಕ್ಷೆತ್ರದ ಬಳಗಾನೂರಿನ ಹಳ್ಳದಲ್ಲಿ ನಾರಾಯಣ ನಗರ ಕ್ಯಾಂಪ್ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಣ್ಣ ನೀರಾವರಿ ಇಲಾಖೆಯಿಂದ ೨ ಕೋಟಿ ಮತ್ತು ಸಾಗರ ಕ್ಯಾಂಪಿನ ರೈತರ ಜಮೀನುಗಳಿಗೆ ನೀರೋಧಗಿಸಲು ೨ ಕೋಟಿ, ಮಾರಲದಿನ್ನಿ ತಾಂಡಕ್ಕೆ ಸಂಪರ್ಕ ಕಲ್ಪಿಸುವ ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ೫ ಕೋಟಿ, ಕಡದರಾಳ ಗ್ರಾಮದಲ್ಲಿ ಕೆರೆ ತುಂಬಿಸುವ ಯೋಜನೆಗೆ ೪೫೭ ಕೋಟಿ ರೂ.ಗಳ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರ…
ಕೇಂದ್ರ ಸರ್ಕಾರ ನರೇಗಾ ಯೋಜನೆ ತಿದ್ದುಪಡಿ ಮಾಡಿ ಯೋಜನೆ ಬಂದ್ ಮಾಡುವ ಹುನ್ನಾರ ನಡೆಸಿದೆ l- ಸಂಸದ ರಾಜಶೇಖರ ಹಿಟ್ನಾಳ ಆರೋಪ
ಮಸ್ಕಿ ಕ್ಷೆತ್ರದ ಮಟ್ಟೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ಮಾತನಾಡಿ ಕೇಂದ್ರ ಸರ್ಕಾರ ಹಲವಾರು ಬಡ ವಿರೋಧಿ ನೀತಿಗಳನ್ನು ತಾಳಿದ್ದು ಇದರಿಂದ ಬಡ ಜನರಿಗೆ ಸಾಕಷ್ಟು ತೊಂದರೆ ಆಗಿದೆ ಇದೀಗ ಮತ್ತೆ ನರೇಗಾ ಯೋಜನೆ ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರ ನರೇಗಾ ಸ್ವರೂಪವೇ ಬದಲಿಸಿದೆ. ಇದು ಬಡವರ ಮೇಲೆ ಬರೆ ಎಳೆದಿದೆ ಮುಂಬರುವ ದಿನಗಳಲ್ಲಿ ನರೇಗಾ ಯೋಜನೆ ಬಂದ್ ಮಾಡುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು. ಆದ್ದರಿಂದ ಇದಕ್ಕೆ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸಿದೆ. ಮುಂಬರುವ ದಿನಗಳಲ್ಲಿ ಉದ್ಯೋಗ ಖಾತ್ರಿ ಬಂದ್ ಮಾಡುವ ಹುನ್ನಾರ ಕೇಂದ್ರ ಸರ್ಕಾರ ಮಾಡುತ್ತಿದೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿ ಜನರಿಗೆ ಆರ್ಥಿಕವಾಗಿ ಬಲ ನೀಡಿದೆ.
ಸಂಸದ ರಾಜಶೇಖರ ಹಿಟ್ನಾಳ ಸಂಸದರು ಹೇಳಿದರು.

