ಹಿಪ್ಪರಗಿ ಬ್ಯಾರೇಜ್‌ನ 22 ನೇ ಈಚೆಗೆ ಮುರಿದಿದ್ದ ಗೇಟ್ ಅನ್ನು ಶುಕ್ರವಾರ ಬೆಳಗಿನ ಜಾವ 5 ಗಂಟೆಗೆ ಅಳವಡಿಸಲಾಯಿತು.
ಮಂಗಳವಾರ ಮಧ್ಯಾಹ್ನ ಜಲಾಶಯದಲ್ಲಿ 5.2 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು. ಶುಕ್ರವಾರ ಬೆಳಗಿನ ಜಾವ ಗೇಟ್ ಅಳವಡಿಸಿದ ನಂತರ ಬ್ಯಾರೇಜ್‌ನಲ್ಲಿ 3.66 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದು, ಜಲಾಶಯದಿಂದ 2.34 ಟಿಎಂಸಿ ಅಡಿ ನೀರು ಹರಿದು ಹೋಗಿದೆ.
ಸದ್ಯ ಕೃಷ್ಣಾ ನದಿಗೆ ಜಿಎಲ್‌ಬಿಸಿ ಕಾಲುವೆಯ ಮೂಲಕ ನೀರು ಹರಿದು ಬರುತ್ತಿದೆ ಎಂದು ಬ್ಯಾರೇಜ್‌ನ ಎಇಇ ಶಿವಮೂರ್ತಿ ತಿಳಿಸಿದರು.

