ತಾಳಿಕೋಟಿ: ತಾಲೂಕಿನ ಚಬನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ರಾಮಲಿಂಗೇಶ್ವರ ಮಠ ಹಾಗೂ ಸಭಾಭವನದ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಇವರಿಗೆ ಆಮಂತ್ರಣ ನೀಡಲಾಯಿತು. ಬುಧವಾರ ಪರಮಪೂಜ್ಯರ ನೇತೃತ್ವದಲ್ಲಿ ವಿಜಯಪುರದ ಎಸ್ ಪಿ ಅವರ ಕಚೇರಿಗೆ ತೆರಳಿದ ನಿಯೋಗವು ನೂತನ ಮಠ ಹಾಗೂ ಸಭಾಭವನದ ಉದ್ಘಾಟನೆ ಅಂಗವಾಗಿ ಫೆಬ್ರವರಿ 4 ರಂದು ನಡೆಯಲಿರುವ ಯೋಧರಿಗೆ ಹಾಗೂ ಚಬನೂರ ಗ್ರಾಮದ ನೌಕರರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರನ್ನು ವಿನಂತಿಸಿಕೊಂಡರು. ಪರಮಪೂಜ್ಯರ ನಿಯೋಗದ ಆಮಂತ್ರಣವನ್ನು ಗೌರವ ಪೂರ್ಣವಾಗಿ ಒಪ್ಪಿಕೊಂಡ ಪೋಲಿಸ್ ವರಿಷ್ಠಾಧಿಕಾರಿ ನಿಂಬರಗಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ತಮ್ಮ ಒಪ್ಪಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಪೂಜ್ಯರ ನಿಯೋಗವು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸನ್ಮಾನಿಸಿ ಆಶೀರ್ವಾದ ನೀಡಿದರು. ಈ ಸಮಯದಲ್ಲಿ ಕೊಡೆಕಲ್ಲದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು, ನಾವದಗಿಯ ಷ.ಬ್ರ.ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು, ಕೋಲಾರದ ಪ್ರಭುಕುಮಾರ ಶ್ರೀಗಳು, ದೇವರ ಹಿಪ್ಪರಗಿಯ ಜಡಿಸಿದ್ದೇಶ್ವರ ಶ್ರೀಗಳು, ಚಬನೂರಿನ ರಾಮಲಿಂಗಯ್ಯ ಶ್ರೀಗಳು, ಪರದೇಶಿ ಮಠದ ಶಿವಯೋಗಿ ಶಿವಾಚಾರ್ಯರು, ಕಲಕೇರಿಯ ಸಿದ್ದರಾಮ ಶಿವಾಚಾರ್ಯರು, ಗದ್ದಗಿ ಮಠದ ಶ್ರೀಗಳು, ಅಥಣಿ ಗಚ್ಚಿನ ಮಠದ ಶ್ರೀಗಳು, ಕೊಗಟನೂರಿನ ಶ್ರೀಗಳು,ವಡವಡಗಿ ಶ್ರೀಗಳು,ಚಡಚಣ ಶ್ರೀಗಳು,ಗುಳಬಾಳ ಶ್ರೀಗಳು, ಮಸಿಬನಾಳ ಶ್ರೀಗಳು, ಕೋರವಾರ ಶ್ರೀಗಳು ಮತ್ತಿತರರು ಇದ್ದರು.

