ತಾಳಿಕೋಟಿ: ಮುದ್ದೇಬಿಹಾಳ ತಾಲೂಕಿನ ನೂತನ ದೈಹಿಕ ಶಿಕ್ಷಣಾಧಿಕಾರಿಯಾಗಿ ನಿಯೋಜನೆಗೊಂಡ ಎ.ವೈ.ದಖನಿ ಅವರನ್ನು ಬಳಗಾನೂರ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಸಿಬ್ಬಂದಿಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಂಗಳವಾರ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಜರುಗಿದ ಕಲಿಕಾ ಹಬ್ಬ ಕಾರ್ಯಕ್ರಮದ ವೇದಿಕೆಯಲ್ಲಿ ಅವರಿಗೆ ಈ ಸನ್ಮಾನ ನೀಡಲಾಯಿತು. ಮುಖ್ಯ ಗುರುಗಳಾದ ಆರ್.ಎಂ. ಮುರಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಮಯದಲ್ಲಿ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಬಿ.ದಮ್ಮೂರಮಠ, ಇಸಿಓ ಸುರೇಶ ಹಿರೇಮಠ,ಇಸಿಓ ಡಿ.ವೈ.ಗುರಿಕಾರ, ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಮಡಿವಾಳಮ್ಮ ನಾಡಗೌಡ,ಸಿಆರ್ಪಿ ಬಾಲಾಜಿಸಿಂಗ್ ಬಿಜಾಪುರ, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ.ವಜ್ಜಲ್, ನೌಕರರ ಪತ್ತಿನ ಸಂಘದ ಅಧ್ಯಕ್ಷ ಸುರೇಶ್ ವಾಲಿಕಾರ, ಕಾರ್ಯದರ್ಶಿ ಎಸ್.ಬಿ.ಬೀರಗೊಂಡ,ಬಿ.ಆರ್.ಪಿ ಕಾಶಿನಾಥ ಸಜ್ಜನ, ಸಿ ಆರ್ ಸಿ ಎಸ್. ಎಮ್ .ಪಾಲ್ಕಿ, ಶಿಕ್ಷಕ ಬಿ.ಐ.ಸಜ್ಜನ, ಎಸ್.ಎಂ.ಬೈಚಬಾಳ, ಗಣ್ಯರಾದ ಮಲ್ಲಣ್ಣ ದೋರನಹಳ್ಳಿ, ಚೆನ್ನಣ್ಣ ಅಲದಿ, ಲೋಕಣ್ಣ ಸಜ್ಜನ, ನಿವೃತ್ತ ಶಿಕ್ಷಕ ಶಿವಣ್ಣ ಕಡಕೋಳ, ಸಂಗನಗೌಡ ಬಿರಾದಾರ,ಬಸನಗೌಡ ದೋರನಹಳ್ಳಿ, ಮುತ್ತು ಮನಹಳ್ಳಿ, ಭೀಮನಗೌಡ ಬಿರಾದಾರ, ಪ್ರಭು ಪತ್ತೆಪೂರ, ಎಸ್.ಎಂ.ಪಾಲ್ಕಿ ಇದ್ದರು.

