ತಾಳಿಕೋಟಿ: ಕಲಿಕಾ ಹಬ್ಬವು ಮಕ್ಕಳ ಕಲಿಕೆಯನ್ನು ಸಂತೋಷದಾಯಕ ಮತ್ತು ಆಕರ್ಷಕ ರೀತಿಯಲ್ಲಿ ಸುಧಾರಿಸಲು ಶಾಲಾ ಶಿಕ್ಷಣ ಇಲಾಖೆಯ ಮಹತ್ವದ ಕಾರ್ಯಕ್ರಮವಾಗಿದೆ ಎಂದು ಮುದ್ದೇಬಿಹಾಳ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಬಿ ದಮ್ಮೂರಮಠ ಹೇಳಿದರು. ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಮಿಣಜಗಿ ಕ್ಲಸ್ಟರ್ ಮಟ್ಟದ 2025-26 ನೇ ಸಾಲಿನ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯೆಗಳ ಜ್ಞಾನವನ್ನು ಬೆಳೆಸುವುದು, ಕಲಿಕಾ ಹಬ್ಬದಿಂದ ಮಕ್ಕಳಲ್ಲಿ ಶಾಲಾ ಭಾಷೆ ಮತ್ತು ಮಾತೃಭಾಷೆಗಳಲ್ಲಿ ಕಲಿಯುವ ಆಸಕ್ತಿ ಮೂಡಿಸುವ ಉದ್ದೇಶವಾಗಿದೆ ಶಿಕ್ಷಕರು ಇದರ ಯಶಸ್ವಿಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಇದು ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಗಳನ್ನು ಅಭಿವ್ಯಕ್ತಗೊಳಿಸುವ ಕಾರ್ಯಕ್ರಮವಾಗಿದೆ ನಿರ್ಣಾಯಕರು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದರು. ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಬಿ.ಟಿ.ವಜ್ಜಲ್ ಮಾತನಾಡಿ ಇದು ಸ್ಪರ್ಧಾತ್ಮಕ ಯುಗವಾಗಿದೆ ಇಲ್ಲಿ ಕೇವಲ ಓದು ಬರಹ ಕಲಿತರೆ ಸಾಲದು ಮಕ್ಕಳು ಪ್ರತಿಭೆಗಳನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ, ಉಜ್ವಲ ಭವಿಷ್ಯವನ್ನು ನಿರ್ಮಾಣ ಮಾಡಲು ಕಠಿಣ ಪರಿಶ್ರಮಿಗಳಾಗಬೇಕು ಹೆತ್ತವರ ನಿರೀಕ್ಷೆಗಳನ್ನು ಹುಸಿಗೊಳಿಸಬಾರದು ಎಂದರು. ಇದೇ ಸಂದರ್ಭದಲ್ಲಿ ಕ್ಷೇತ್ರದ ಸಮನ್ವಯಾಧಿಕಾರಿ ಆರ್.ಬಿ. ದಮ್ಮೂರಮಠ ಹಾಗೂ ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಎ.ವೈ.ದಖನಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಗುರುಗಳಾದ ಆರ್.ಎಂ.ಮುರಾಳ ಅಧ್ಯಕ್ಷತೆ ವಹಿಸಿದ್ದರು.ಇಸಿಓ ಸುರೇಶ ಹಿರೇಮಠ ಕಲಿಕಾ ಹಬ್ಬ ಸೆಲ್ಫಿ ಸ್ಟ್ಯಾಂಡ್ ಅನಾವರಣಗೊಳಿಸಿದರು. ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಮಡಿವಾಳಮ್ಮ ನಾಡಗೌಡ ಕಾರ್ಯಕ್ರಮ ನಿರ್ವಹಿಸಿದರು.ಸಿಆರ್ಪಿ ಬಾಲಾಜಿಸಿಂಗ್ ಬಿಜಾಪುರ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗಣ್ಯರಾದ ಮಲ್ಲಣ್ಣ ದೋರನಹಳ್ಳಿ, ಚೆನ್ನಣ್ಣ ಅಲದಿ, ಲೋಕಣ್ಣ ಸಜ್ಜನ, ನಿವೃತ್ತ ಶಿಕ್ಷಕ ಶಿವಣ್ಣ ಕಡಕೋಳ ಸಂಗನಗೌಡ ಬಿರಾದಾರ,ಬಸನಗೌಡ ದೋರನಹಳ್ಳಿ, ಮುತ್ತು ಮನಹಳ್ಳಿ, ಭೀಮನಗೌಡ ಬಿರಾದಾರ, ಪ್ರಭು ಪತ್ತೆಪೂರ, ಪ್ರಭು ವಾಲಿ,ಇಸಿಓ ಡಿ.ವೈ.ಗುರಿಕಾರ,ಬಿ.ಆರ್ಪಿ ಕೆ.ಎಸ್. ಸಜ್ಜನ,ಸಿಆರ್ಪಿ ಎಸ್.ಎಂ.ಪಾಲ್ಕಿ,ಶಿಕ್ಷಕ ಬಿ.ಐ.ಸಜ್ಜನ, ಸುರೇಶ ವಾಲೀಕಾರ,ಎಸ್.ಬಿ.ಬೀರಗೊಂಡ, ಆರ್.ಎಸ್.ಹಿಪ್ಪರಗಿ,ಮು.ಗು. ಸಿ.ಎಸ್.ಸಿದ್ದರೆಡ್ಡಿ ಕೆ.ಡಿ.ಬಿರಾದಾರ, ಬಿ.ಸಿ.ಮಸರಕಲ್,ಸಂಜು ಹಜೇರಿ,ರಾಘು ಬಾಟಲಿ, ಮಿಣಜಗಿ ಕ್ಲಸ್ಟರ್ ಶಾಲೆ ಶಿಕ್ಷಕರು, ನಿರ್ಣಾಯಕರು ಹಾಗೂ ಮಕ್ಕಳು ಇದ್ದರು.ಕುಮಾರಿ ಅನುಜಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಎಸ್ ಎಮ್ ಬೈಚಬಾಳ ಸ್ವಾಗತಿಸಿದರು. ಶಿಕ್ಷಕ ಬಿ ಐ ಸಜ್ಜನ ವಂದಿಸಿದರು.
