ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಇಂದು ವಿವಿಧ ಕಚೇರಿಗಳಿಗೆ ಭೇಟಿ ನೀಡಿದರು.ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 15 ತಂಡಗಳಿಂದ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಲಾಯಿತು.
ಕಲಬುರಗಿ ಮಹಾನಗರ ಪಾಲಿಕೆ, ಸಬ್ ರೆಜಿಸ್ಟರ್ ಕಚೇರಿ, ಜೇವರ್ಗಿ ತಾಲೂಕಿನ ಶಾಲೆ, ಹಾಸ್ಟೆಲ್ ಗಳ ಮೇಲೆ ದಾಳಿ ನಡೆಸಲಾಗಿ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಲಾಯಿತು.
ಪಾಲಿಕೆ ಟೆಂಡರ್ ಸೆಕ್ಷನ್ ನಲ್ಲಿ ಅಧಿಕಾರಿ ಸಿಬಂದಿಗಳೇ ಇಲ್ಲದಿರುವುದು ಕಂಡು ಬಂತು. ಪಾಲಿಕೆ ಕಚೇರಿ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಕಚೇರಿಯ ಹಿರಿಯ ನ್ಯಾಯಾಧೀಶ ವಿಜಯಾನಂದ ಆಕ್ರೋಶ ವ್ಯಕ್ತಪಡಿಸಿದರು.ಸಂಬಂಧಿಸಿದ ಸೆಕ್ಷನ್ ನಲ್ಲಿ ಅಧಿಕಾರಿ, ಸಿಬ್ಬಂದಿಗಳು ಇಲ್ಲದಿರುವುದಕ್ಕೆ ತರಾಟೆಗೆ ತೆಗೆದುಕೊಂಡರು. ಪ್ಯೂವುನ್ ಗಳು ಡ್ರೆಸ್ ಕೋಡ್ ಧರಿಸದಿರುವುದಕ್ಕೆ ತೀವ್ರ ಆಕ್ರೋಶವನ್ನೂ ವ್ಯಕ್ತಪಡಿಸಲಾಯಿತು.
ಟೆಂಡರ್ ವಿಭಾಗದ ಕಂಪ್ಯೂಟರ್ ಆಪರೇಟರ್ ಗಳ ಫೋನ್ ಪೇ ಯನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದರು.

