ಎಪ್ರಿಲ್ 18, 2026ರಂದು ಲಂಡನ್‌ನಲ್ಲಿ ನಡೆಯಲಿರುವ ಗುರು ಬಸವೇಶ್ವರರ 895ನೇ ಜನ್ಮವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಅಧಿಕೃತ ಆಮಂತ್ರಣವನ್ನು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ತಾವರ್‌ಚಂದ್ ಗೆಹ್ಲೋತ್ ಅವರಿಗೆ ಲ್ಯಾಂಬೆತ್ ಬೊರೋ (ಲಂಡನ್) ನ ಮಾಜಿ ಮೇಯರ್ ಹಾಗೂ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಅಧ್ಯಕ್ಷರಾದ ಡಾ| ನೀರಜ್ ಪಾಟೀಲ್ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲರು, ಬ್ರಿಟಿಷ್ ಸಂಸತ್ ಭವನದ ಎದುರಿನ ಅಲ್ಬರ್ಟ್ ಎಂಬ್ಯಾಂಕ್‌ವೆುಂಟ್‌ನಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪಿಸುವಲ್ಲಿ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ವಹಿಸಿದ ಕಾಳಜಿ ಮತ್ತು ಯಶಸ್ವಿ ಪ್ರಯತ್ನವನ್ನು ಶ್ಲಾ ಸಿದರು. ಕರ್ನಾಟಕದ ಹೊರಗೆ ಇರುವ ಅತ್ಯಂತ ಮಹತ್ವದ ಕರ್ನಾಟಕ ಪ್ರತಿನಿಧಿಕ ಪ್ರತಿಮೆಯಾಗಿ ಇದು ಗುರುತಿಸಿಕೊಂಡಿದ್ದು, ಬ್ರಿಟನ್‌ನಲ್ಲಿ ಭಾರತೀಯ ಪ್ರಧಾನಮಂತ್ರಿ ಅನಾವರಣಗೊಳಿಸಿದ ಮೊದಲ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಬಸವೇಶ್ವರರು ಪ್ರತಿಪಾದಿಸಿದ ಪ್ರಜಾಸತ್ತಾತ್ಮಕತೆ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದಂತಹ ವಿಶ್ವಮಾನ್ಯ ಮೌಲ್ಯಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡುವಲ್ಲಿ ಫೌಂಡೇಶನ್‌ನ ಕಾರ್ಯಗಳನ್ನು ಗೆಹೊತ್ ಪ್ರಶಂಸಿಸಿದರು.
ಸಂವಿಧಾನಾತ್ಮಕ ನಿಯಮದಂತೆ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳ ಅನುಮೋದನೆ ದೊರೆತಲ್ಲಿ, ಲಂಡನ್‌ನಲ್ಲಿ ಗುರು ಬಸವೇಶ್ವರರ ಜನ್ಮವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

