ತಾಳಿಕೋಟಿ: ಭಾರತದ ಮೊದಲ ಶಿಕ್ಷಕಿ ದಿಟ್ಟ ಹೋರಾಟಗಾರ್ತಿ ಸಾವಿತ್ರಿಬಾಯಿ ಫುಲೆ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಗಲಿರುಳು ದುಡಿದ ಮಹಾನ್ ಸಾಧಕಿಯಾಗಿದ್ದಾಳೆ. ಅಂತಹ ತಾಯಿಯನ್ನು ಇಂದು ನೆನೆಯುವದು ಎಲ್ಲ ಹೆಣ್ಣು ಮಕ್ಕಳ ಕರ್ತವ್ಯವೆಂದು ಚನ್ನ ಬಸಮ್ಮ ಚಂದಪ್ಪ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಜಾತಾ ಚಲವಾದಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾಳಿಕೋಟಿಯಲ್ಲಿ ಚನ್ನಬಸಮ್ಮ ಚಂದಪ್ಪ ಪ್ರತಿಷ್ಠಾನ(ರಿ) ಕಾರ್ಯಕ್ರಮದಲ್ಲಿ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣಿ ಯನ್ನು ಆಚರಿಸುತ್ತ ಮನುವಿನ ವ್ಯಾಖ್ಯಾನವನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಹೋಗುತಿದ್ದ ಕಾಲಘಟ್ಟದಲ್ಲಿ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ದ ಸಮಾಜವನ್ನು ವೈಚಾರಿಕತೆಗೆ ಹಚ್ಚಿ ಶಿಕ್ಷಣಕ್ಕೆ ದಾರಿ ತೋರಿಸಿದವರು ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಿದಾನಂದ ಮರ್ಜಿಯವರು ಸಾವಿತ್ರಿಬಾಯಿ ಮತ್ತು ಜ್ಯೋತಿಬಾ ಫುಲೆ ಸಾಮಾಜಿಕವಾಗಿ ದುಡಿದ ದಂಪತಿಗಳು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮಹತ್ವಕೊಟ್ಟವರು ಸತ್ಯ ಶೋಧಕ ಸಮಾಜ ಸ್ಥಾಪಿಸಿದ ಮಹಾತ್ಮರು ಎಂದು ಉಪನ್ಯಾಸವನ್ನು ನೀಡಿದರು. ಅತಿಥಿಗಳಾದ ಕುಸಪ್ಪಾ ದೊಡಮನಿ, ಧನಲಕ್ಷ್ಮಿ ದೊಡಮನಿ, ಶ್ರೀನಿವಾಸ ಹುನಗುಂದ, ಶರಣಮ್ಮ ಮರ್ಜಿ ಹಾಗೂ ಶ್ವೇತಾ, ಸಿದ್ದಾರೂಢ, ಚಂದ್ರಶೇಖರ, ಕಾಸ್ಸಸಾಹೇಬ,ಜ್ಯೋತಿಸಾಹೇಬ ಇತರರು ಉಪಸ್ಥಿತರಿದ್ದರು. ನೇಹಾ ಮರ್ಜಿ ಕಾರ್ಯಕ್ರಮವನ್ನು ನಿರೂಪಿಸಿದರು. ಅರುಂಧತಿ ಚಲವಾದಿ ಸ್ವಾಗತಿಸಿದರು. ಚಿನ್ನು ಚಲವಾದಿ ವಂದನಾರ್ಪಣಿಯನ್ನು ಮಾಡಿದರು.

