ಜಾನೇಕಲ್ : ಜ 3 ದಿನಾಂಕ 3.01.2026 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಾನೇಕಲ್ ಶಾಲೆಯಲ್ಲಿ 2 ನೇ ಪೋಷಕ – ಶಿಕ್ಷಕ ಮಹಾ ಸಭೆ ಯನ್ನು ಏರ್ಪಡಿಸಲಾಯಿತು. ಈ ಕಾರ್ಯಕ್ರಮ ದ ದಿನ ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು FLN ,LBA ಕುರಿತು ಮಕ್ಕಳಿಗೆ ಮತ್ತು ಪಾಲಕರಿಗೆ ಜಾಗೃತಿ ಮೂಡಿಸಿ ಜೊತೆಗೆ ಬಾಲ್ಯ ವಿವಾಹ ತಡೆಗಟ್ಟುವ ಕುರಿತು ಮಾಹಿತಿ ನೀಡಲಾಗಿದೆ. ಕರ್ನಾಟಕ ಸರ್ಕಾರ ಮಕ್ಕಳಿಗೆ ನೀಡುವ ಬಿಸಿಯೂಟ ಮೊಟ್ಟೆ ಬಾಳೆಹಣ್ಣು ಮತ್ತು ಶೈಕ್ಷಣಿಕ ಪ್ರಗತಿ ಅಂಶಗಳ ಕುರಿತು ಪಾಲಕರಿಗೆ ತಿಳಿಸಿದರು ಮತ್ತು ಮನೆಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಕಲಿಕಾ ವಾತಾವರಣ ಮನೆಯಲ್ಲಿ ನೀಡುವಂತೆ ಮನವೊಲಿಸುವುದು ಸೇರಿದಂತೆ ಹಲವು ಸಮಸ್ಯೆಗಳು ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಎಂದು ಮುಖ್ಯಗುರುಗಳು ಜೈನೂಲ್ ಜಾಹಾಗಿರದಾರ್ ಮತ್ತು CRP ವೆಂಕಟೇಶ ಮತ್ತು ಅತಿಥಿ ಶಿಕ್ಷಕರಾದ ರವಿಕುಮಾರ್ , ರಂಗನಾಥ, ಅಂಬರೀಶ ,ಮಹೇಶ್ ಮತ್ತು ಉಮಾಶ್ರೀ ಹಾಗೂ ಪಾಲಕರಾದ ಅಮರೇಶ್ ಕುಂಬಾರ, ಅಮರೇಶ್ ನಾಯಕ,ತಿರುಪತಿ, ಚೆನ್ನಬಸವ , ಬಾಲಸ್ವಾಮಿ ಅನೇಕ ಪಾಲಕರು ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಊರಿನ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

