ಕವಿತಾಳ
ಇದೇ ತಿಂಗಳು ದಿನಾಂಕ 12.13.14 ರಂದು ನಡೆಯುವ ರಾಜಕೀಯೇತರ ಹಾಲುಮತ ಪೂಜಾರಿಗಳಿಗೆ ಸಂಸ್ಕೃತ ಪಠಣ ಧರ್ಮ ಜಾಗೃತಿ, ಪೂಜಾ ವಿಧಾನ ಹಾಲುಮತ ಸಂಸ್ಕೃತ ಹಾಗೂ ಸಾಹಿತ್ಯ ಸಮ್ಮೆಳನ ಮೂರು ದಿನಗಳ ಕಾರ್ಯಕ್ರಮವಿ ಕನಕಗುರು ಪೀಠ ತೀಂಥಣಿ ಬ್ರಿಜ್‌ನಲ್ಲಿ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿದ್ದು ಹಾಲುಮತ ಸಮಾಜದ ಪೂಜಾರಿಗಳು ತರಬೇತಿಯಲ್ಲಿ ಪಾಲ್ಗೊಂಡು ಇದರ ಸಧುಪಯೋಗವನ್ನು ಪಡೆದು ಕೊಳ್ಳುಬೇಕು’ ಎಂದು ಹಾಲುಮತ ಮಹಾಸಭಾದ ರಾಯಚೂರು ಜಿಲ್ಲಾ ಅಧ್ಯಕ್ಷರಾದ ಶಿವಣ್ಣ ವಕೀಲರು ಹೇಳಿದರು.
ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
`ಈ ವರ್ಷವೂ ವಿಶೇಷವಾಗಿ ಹಾಲುಮತ ಧರ್ಮದ ಇತಿಹಾಸವು ೨೫೦೦ವರ್ಷಗಳ ಇತಿಹಾಸದ ಹಿನ್ನಲೆಇದ್ದು ಇತರ ಸಮಾಜಗಳು ಕಡಿಮೆ ಅವದಿಯಲ್ಲಿ ಧಾರ್ಮಿಕವಾಗಿ, ರಾಜಕೀಯವಾಗಿ ಎತ್ತರಕ್ಕೆ ಬೆಳೆದಿದ್ದು ಇದರ ದೃಷ್ಥಿಯಿಂದ ನ್ಮಮ ಹಲುಮತ ಸಮಾಜವು ಧಾರ್ಮಿಕವಾಗಿ ,ಸಂಸ್ಕೃತಿಕವಾಗಿ ಉನ್ನತಿಗೊಳಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇರುತ್ತದೆ ಮತ್ತು ಇಂದಿನ ಪೂಜಾರಿಗಳು ಆರ್ಥಿಕವಾಗಿ ಮತ್ತು ಸಂಸ್ಕೃತಿಕವಾಗಿ ತೀರ ಹಿಂದುಳಿದಿದ್ದು ಅವರ ಕುಟುಂಬದ ಉನ್ನತಿ ಮತ್ತು ಸಮಾಜದ ಏಳಿಗೆಗಾಗಿಧರ್ಮದ ಜಾಗೃತಿಗಾಗಿ ರಾಜ್ಯದ ವಿವಿಧ ಭಾಗಗಳಿಂದ ಪಂಡಿತರು ವಿವಿಧ ವಿಷಯಗಳಲ್ಲಿ ಪರಿಣಿತಿ ಹೊಂದಿದ ತಜ್ಞರಿಂದಪೂಜಾರಿಗಳಿಗೆ ತರಬೇತಿಯಲ್ಲಿ ಸಾಹಿತ್ಯ, ಸಾಂಕೃತಿಕ ಬೋಧನೆಯನ್ನು ನೀಡಲಾಗುವುದು ಇದರ ಉಪಯೋಗವನ್ನು ಸಮಾಜದ ಪೂಜಾರಿಗಳು ,ವಿದ್ಯಾವಂತ ಮಕ್ಕಳು, ಮುಖಂಡರು ಈ ತರಬೇತಿಯಲ್ಲಿ ಪಾಲ್ಗೋಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ’ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮಾಳಪ್ಪ ತೋಳ, ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಮೌನೇಶ ಹಿರೇಕುರುಬರು. ಮಲ್ಲಯ್ಯ ನಸ್ಲಾಪೂರ ಇದ್ದರು.

