ಸಿಂಧನೂರು : ಜೆ. ಪಿ. ಪಿ. ಜೈನ್ ಯುವ ಫೌಂಡೇಶನ್ ಸಿಂಧನೂರು ವತಿಯಿಂದ ಜೈನ್ ಸಮಾಜದ ಗುರುಗಳಾದ ಆಚಾರ್ಯ ಪಾಶ್ವಚಂದ್ರ ಜೀ ಜೈನ್ ಗುರುಗಳ 77ನೇ ವರ್ಷದ ಜನ್ಮ ವರ್ಧಂತಿ ಅಂಗವಾಗಿ ಆಶ್ರಮದಲ್ಲಿ ಮಹಾಪ್ರಸಾದ ಸೇವೆ ಹಣ್ಣು ಹಂಪಲುಗಳನ್ನು ವಿತರಿಸಿ ಅಗತ್ಯ ಆಹಾರ ವಸ್ತುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಯಶ್ ಸಕಲೇಚಾ ಮಾತನಾಡಿ ನಮ್ಮ ಗುರುಗಳು ನಮ್ಮ ಸಮಾಜದ ಪ್ರತಿಯೊಬ್ಬ ಯುವಕರಲ್ಲಿ ಸೇವಾ ಮನೋಭಾವನೆಯ ಪಾಠವನ್ನು ಮಾಡುವ ಮೂಲಕ ಜಾಗೃತಗೊಳಿಸುತ್ತಾ ಆಶೀರ್ವದಿಸುತ್ತಿದ್ದಾರೆ. ಅವರ ಜನ್ಮ ದಿನವನ್ನು ನಮ್ಮ ಪೌಂಡೇಶನ್ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ಹಮ್ಮಿಕೊಳ್ಳುತ್ತೇವೆ. ಗುರುಗಳು ನಮ್ಮ ಸಿಂಧನೂರಿನ ಕರುಣೆಯ ಕಾರುಣ್ಯಾಶ್ರಮಕ್ಕೆ ನಿರಂತರ ಶುಭಾಶಿರ್ವಾದ ಮೂಲಕ ಸೇವೆಗೆ ಸ್ಪೂರ್ತಿ ನೀಡಿದ್ದಾರೆ. ಅನಾಥರಿಗೆ ಸಹಾಯ ಸಹಕಾರ ಮಾಡುವ ಸಂಕಲ್ಪದ ಆಶೀರ್ವಾದವೇ ನಮ್ಮ ಸೇವೆಗೆ ಶ್ರೀರಕ್ಷೆ ಅವರ ಸುಂದರ ಸಮಾಜದ ಕನಸಿಗೆ ಇಂತಹ ಕಾರ್ಯಗಳು ನಡೆಯುತ್ತಾ ಇರಬೇಕು ಎನ್ನುವುದು ನಮ್ಮ ಗುರುಗಳ ಆಶಯವಾಗಿದೆ. ಕಾರುಣ್ಯ ಆಶ್ರಮದಲ್ಲಿರುವ ಪ್ರತಿಯೊಬ್ಬ ಹಿರಿಯರು ಮತ್ತು ವಯಸ್ಕರ ಬುದ್ಧಿಮಾಂದ್ಯರು ದೇವರ ಸ್ವರೂಪಿಗಳು ಇಂತಹ ದೇವರ ಸೇವೆ ಮಾಡಲು ನಮಗೆ ಅವಕಾಶ ಸಿಕ್ಕಿರುವುದು ನಮ್ಮ ಜೆ. ಪಿ. ಪಿ.ಯುವ ಫೌಂಡೇಶನ್ ನ ಪುಣ್ಯದ ಕಾರ್ಯವಾಗಿದೆ ಎಂದು ಮಾತನಾಡಿ ಎಲ್ಲಾ ವೃದ್ಧರೂ ಹಾಗೂ ಬುದ್ಧಿಮಾಂದ್ಯರಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಜೆ. ಪಿ. ಪಿ. ಯುವ ಫೌಂಡೇಶನ್ ನ ಮಹಾವೀರ ಜೈನ್.ಯಶ್ ಸಕಲೇಚಾ.ವಿಶಾಲ್ ಲೋಡಾ.ಯಶ್ ಚಾಜೇಡ್.ಹರ್ಷ ಬೋರಾ.ಸಮ್ಮಕ್ ಜೈನ್.ಇಮಾನಸು ಜೈನ್. ಸಂಜಯ್ ಜೈನ್ ಶೇಟ್ ಬಳಗಾನೂರು. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ. ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ. ಜ್ಯೋತಿ. ಹಾಗೂ ಜೆ. ಪಿ. ಪಿ. ಯುವ ಫೌಂಡೇಶನ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು

