ಮಸ್ಕಿ ಸಮೀಪದ ಹಾಲಾಪೂರ ಸರಕಾರಿ ಪ್ರೌಢ ಶಾಲೆಯಲ್ಲಿ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಬಾಪುಲೆ ಜನ್ಮದಿನಾಚರಣೆ ಹಾಗೂ ಪಾಲಕ ಪೋಷಕರ ಸಭೆ ನಡೆಯಿತು. ಸಭೆಯಲ್ಲಿ ಮುಖಂಡರಾದ ಬಿ ಕರಿಯಪ್ಪ ಮಾತನಾಡಿ ಸಾವಿತ್ರಿ ಬಾಪುಲೆ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅಪಾರ ಕೊಡುಗೆಯನ್ನು ನೀಡಿದ್ದಾರೆ ಶಿಕ್ಷಣ ನಮ್ಮ ಹಕ್ಕು ,ಈಗಿನ ವಿದ್ಯಾರ್ಥಿಗಳು ಸರಿಯಾಗಿ ಶಿಕ್ಷಣ ಪಡೆದು ಭವಿಷ್ಯದಲ್ಲಿ ಉನ್ನತ ಸ್ಥಾನ ಪಡೆಯಬೇಕು ಎಂದು ಹೇಳಿದರು. ನಂತರ ಮಾತನಾಡಿದ ಮುಖ್ಯ ಗುರು ಸುಭಾಸ್ ಸಿಂಗ್ ಭಾರತದ ಮಹಿಳಾ ಶಿಕ್ಷಣ ಪಿತಾಮಹಿ ಸಾವಿತ್ರಿಬಾಯಿ ಬಾಪುಲೆ ಅವರು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ ಸಮಾಜದ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ, ಸತಿ ಪದ್ಧತಿ, ಅಸ್ಪೃಶ್ಯತೆ, ಜಾತಿ ತಾರತಮ್ಯ ವಿರುದ್ಧ ಹೋರಾಡಿದ ಅಪ್ರತಿಮ ಮಹಿಳೆ ಸಾವಿತ್ರಿಬಾಯಿ ಬಾಪುಲೆ ಆಗಿದ್ದರು ಹಾಗೂ ಪಾಲಕ ಪೋಷಕರು ತಮ್ಮ ಮಕ್ಕಳ ಅಭ್ಯಾಸದ ಕಡೆ ಗಮನ ಹರಿಸಬೇಕು, ಮಕ್ಕಳ ಕಲಿಕೆ ದೃಷ್ಟಿಯಿಂದ ಶಿಕ್ಷಕರ ಜೊತೆ ಸಂಪರ್ಕ ಇಟ್ಟುಕೊಳ್ಳಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷ ಯಂಕಪ್ಪ ಪೂ.ಪಾ, ಹಳದಯ್ಯ ಸ್ವಾಮಿ, ಕರಿಯಪ್ಪ ಎಚ್ ಕೆ, ಸಿದ್ದಾರ್ಥ್ ಪೊ.ಪಾ, ಬಸವರಾಜ್ ವಾರ್ಡನ್, ಚಂದಪ್ಪ, ಮಹಾಂತೇಶ, ಲಾಲಪ್ಪ ಹಾಗೂ ಪಾಲಕ ಪೋಷಕರು, ಶಿಕ್ಷಕ ಶಿಕ್ಷಕಿಯರು ಇದ್ದರು.

