ಸಿಂಧನೂರು ಜನವರಿ 03: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸರ್ಕಾರಿ ಉನ್ನತೀಕರಿಸದ ಪಬ್ಲಿಕ್ ಶಾಲೆ ಜವಳಗೇರಾ ಇವರ ಸಂಯುಕ್ತ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ದಂತ ಆರೋಗ್ಯ ತಪಾಸಣೆ ಕೈಗೊಳ್ಳಲಾಯಿತು,
ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೇರಾದ ದಂತ ವೈದ್ಯರಾದ ಡಾಕ್ಟರ ಅಪ್ರೋಜ್ ಭಾನು ಅವರು ಮಕ್ಕಳ ದಂತ ಆರೋಗ್ಯ ತಪಾಸಣೆ ಕೈಗೊಂಡರು, ಮಕ್ಕಳಿಗೆ ದಂತ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ ಮಕ್ಕಳು ಬೆಳಗ್ಗೆ ದಿನಾಲು ಸರಿಯಾದ ವಿಧಾನದಲ್ಲಿ. ಬ್ರೂಷ್ ಮಾಡುವ ಮೂಲಕ ತಮ್ಮ ಬಾಯಿಯ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು ಮಕ್ಕಳಿಗೆ. ಸ್ವಲ್ಪ ಪ್ರಮಾಣದಲ್ಲಿ ಹಲ್ಲಿನ ತೊಂದರೆ ಇರುವಂತ ಮಕ್ಕಳಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಿದರು. ಹೆಚ್ಚಿನ ಪ್ರಮಾಣದಲ್ಲಿ ತೊಂದರೆ ಇರುವ ಮಕ್ಕಳನ್ನು ಸರಕಾರಿ ಸಾರ್ವಜನಿಕ ಆಸ್ಪತ್ರೆ ಸಿಂಧನೂರಿಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಲಹೆ ನೀಡಿದರು
ನಂತರ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಅವರು ಮಕ್ಕಳು ತಮ್ಮ ದಂತದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ತಂಬಾಕು ಮತ್ತು ಇನ್ನಿತರ ದುಶ್ಚಟಗಳಿಂದ ದೂರವಿರಬೇಕು ದಿನನಿತ್ಯ ಬಾಯಿಯನ್ನು ಸರಿಯಾದ ವಿಧಾನದಲ್ಲಿ ಬ್ರೂಷ್ ಮಾಡುವ ಮೂಲಕ ಸ್ವಚ್ಛಗೊಳಿಸಬೇಕು ಹಾಗೂ ಬಾಯಿಯಲ್ಲಿ ಯಾವದ ರೀತಿಯ ಹಾಗೂ ಹಲ್ಲಿನ ನೋವು ಕಂಡು ಬಂದರೆ ಕೂಡಲೇ ದಂತ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ, ಬಾಯಿಯಲ್ಲಿ ಹಲ್ಲು ಹುಳುಕು ತಿಂದಿರುವುದು ಕೀವು ಸೋರುವುದು ಮತ್ತು ತೀವ್ರವಾದ ಹಲ್ಲಿನ ನೋವು ಬಾಯಿಯ ವಾಸನೆ ಬರುವುದು ಕಂಡು ಬಂದರೆ ಕೂಡಲೇ ದಂತ ವೈದ್ಯರನ್ನು ಭೇಟಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ ಎಂದು ಸರಕಾರಿ ಪಬ್ಲಿಕ್ ಶಾಲೆಯ ಮಕ್ಕಳಿಗೆ ದಂತ ಆರೋಗ್ಯ ಕುರಿತು ಆರೋಗ್ಯ ಶಿಕ್ಷಣ ಮತ್ತು ಸಂವಹನ ನೀಡಲಾಯಿತು.
ಈ ಸಂದರ್ಭದಲ್ಲಿ ಸರಕಾರಿ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರು ಹನುಮಂತಪ್ಪ ನಾಯಕ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಅಂಬಮ್ಮ ಹಾಗೂ ಶಾಲೆಯ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

