ಸಿಂಧನೂರು,ಜ.02: ಸಾರ್ವಜನಿಕರು ಜಾತ್ರೆಯ ಸಮಯದಲ್ಲಿ ಕುಡಿಯಲು ಶುದ್ಧ ನೀರು ಬಳಸುವ, ಸೇವಿಸುವ ಆಹಾರ ಸಂಪೂರ್ಣವಾಗಿ ಬೇಯಿಸಿ ಸೇವಿಸುವ ಹಾಗೂ ಆಹಾರವನ್ನು ತರೆದಿಟ್ಟು ಮಾರಾಟ ಮಾಡದಂತೆ ಸಹಕರಿಸುವ ಮೂಲಕ ಸಂಭಾವ್ಯ ವಾಂತಿ ಬೇಧಿ ಪ್ರಕರಣಗಳು ಸಂಭವಿಸದಂತೆ ಆರೋಗ್ಯ ಇಲಾಖೆಯು ಕೈಗೊಳ್ಳುವ ಜಾಗೃತಿ ಹಾಗೂ ತುರ್ತು ಚಿಕಿತ್ಸಾ ಕೇಂದ್ರದಲ್ಲಿ ನೀಡುವ ಚಿಕಿತ್ಸಾ ವ್ಯವಸ್ಥೆಯನ್ನು ಸದುಪಯೋಗ ಪಡೆದುಕೊಳ್ಳಲು ಸಾರ್ವಜನಿಕರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರ ಬಾಬು ವಿನಂತಿಸಿದರು.

 

ಸಿಂಧನೂರು ತಾಲುಕಿನ ಶ್ರೀಕ್ಷೇತ್ರ ಸೋಮಲಾಪೂರ ಅಂಭಾಮಠದಲ್ಲಿ ಅಮ್ಮನ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಬೇಟಿ ನೀಡಿ ಆರೋಗ್ಯ ಸೇವೆಗಳನ್ನು ಖುದ್ದು ಪರಿಶೀಲಿಸಿ ಮಾತನಾಡುತ್ತಾ, ಈಗಾಗಲೆ ಎಲ್ಲ ನೀರಿನ ಮಾದರಿಗಳನ್ನು ನಿರಂತರವಾಗಿ ಕ್ಷೇತ್ರ ಸಿಬ್ಬಂದಿಯವರ ವೈದ್ಯಕೀಯ ತಂಡದ ಮೂಲಕ ಕ್ಲೋರಿನೆಷನ್‌ ಕೈಗೊಂಡು ಪರೀಕ್ಷೆಗೆ ಒಳಪಡಿಸಲಾಗಿದೆ.

ಈಗಾಗಲೆ ಮಾನ್ಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ರವರ ಮಾರ್ಗದರ್ಶನದಲ್ಲಿ ಜಾತ್ರಾ ಸಮಿತಿ ಮೂಲಕ ಎರಡು ಕಡೆಗಳಲ್ಲಿ ತುರ್ತು ಚಿಕಿತ್ಸಾ ಕಿಯಾಸ್ಕ್‌ಗಳನ್ನು ಹಾಗೂ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗಿದೆ. ಹಾಗೂ ಅಗತ್ಯ ಔಷಧಿ ದಾಸ್ತಾನುಗಳೊಂದಿಗೆ ದಿನದ ಇಪ್ಪನ್ಕಾಲು ಗಂಟೆ ಕರ್ತವ್ಯ ನಿರ್ವಹಿಸಲು ವೈದ್ಯರು/ಸಿಬ್ಬಂದಿಗಳನ್ನು ದಿನಾಂಕ 7.01.2025 ರವರೆಗೆ ನಿಯೋಜಿಸಲಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡದಂತೆ ಊಟದ ಪೂರ್ವ ಶೌಚದ ನಂತರ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಲು ಆರೋಗ್ಯ ಶಿಕ್ಷಣವನ್ನು ಸಿಬ್ಬಂದಿಯವರು ನೀಡುತ್ತಿದ್ದಾರೆ, ಅಲ್ಲದೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಮೆಲ್ಮಟ್ಟದ ಆಸ್ಪತ್ರೆಗೆ ಕರೆದುಕೊಂಡು ಹೊಗಲು ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದ್ದು ಯಾವುದೇ ಆರೋಗ್ಯ ಸಮಸ್ಯೆಗಳಿಗೆ ತಕ್ಷಣವೇ ತುರ್ತು ಚಿಕಿತ್ಸಾ ಕೇಂದ್ರದ ಸದುಪಯೋಗ ಪಡೆಯಲು ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ ಗಣೇಶ್‌ ಕೆ, ತಾಲೂಕಾ ಆರೋಗ್ಯಾಧಿಕಾರಿ ಡಾ ಅಯ್ಯನಗೌಡ ಸೇರಿದಂತೆ ವೈದ್ಯರು, ಸಿಬ್ಬಂದಿಯವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *